Wednesday, December 25, 2024

ರಾಜಕೀಯ ಪ್ರವೇಶದ ಬಗ್ಗೆ ಯದುವೀರ್ ಒಡೆಯರ್‌ ಹೇಳಿದ್ದೇನು?

ಬೆಂಗಳೂರು : ಮೈಸೂರು ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರಾಜಕೀಯ ಪ್ರವೇಶ ವಿಷಯ ಆಗಾಗ್ಗೆ ಮುನ್ನೆಲೆಗೆ ಬರುತ್ತದೆ. ಈ ಬಗ್ಗೆ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಮುಂದೆಯೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಯದುವೀರ್‌ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್ ಬಂದ ಸಂದರ್ಭದಲ್ಲೆಲ್ಲಾ ನಮ್ಮ ಸ್ಪರ್ಧೆಯ ವಿಚಾರ ಕೇಳಿಬರುತ್ತದೆ. ನಾನು ಅದರ ಬಗ್ಗೆ ಹೆಚ್ಚು ಗಮನಕೊಡುವುದಿಲ್ಲ. ಅದರ ಬಗ್ಗೆ ಆಸಕ್ತಿಯನ್ನು ತೊರುವುದಿಲ್ಲ ಎಂದು ಹೇಳಿದ್ದಾರೆ.

ಅರಮನೆ ಸಂಪ್ರದಾಯ ಪಾಲನೆ, ಆಚಾರ ವಿಚಾರಗಳಿಗೆ ಬದ್ಧನಾಗಿರುವುದಕ್ಕೆ ನಾನು ಹೆಚ್ಚು ಮಹತ್ವ ನೀಡುತ್ತೇನೆ. ಜನರು ಪ್ರೀತಿಯಿಂದ ಕರೆದ ಕಡೆ ಹೋಗಿ ಬರುತ್ತೇನೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುವೆ ಎಂದು ಯದುವೀರ್ ತಿಳಿಸಿದ್ದಾರೆ.

ಜನಪರ ಆಡಳಿತ ನೀಡಬೇಕು

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೂತನ ಸಿಎಂ, ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಅಳೆಯಲು ಸಾಧ್ಯವಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಯಾವುದೇ ಸರ್ಕಾರ ಬಂದರೂ ಜನಪರ ಆಡಳಿತ ನೀಡಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.

ದೇವಸ್ಥಾನದಿಂದಲೇ ಆರಂಭವಾಗಲಿ

ನಮ್ಮ ಮುಂದಿನ ಪೀಳಿಗೆಗೆ ದೇವಸ್ಥಾನಗಳ ಮಹತ್ವ ತಿಳಿಸುವ ಅಗತ್ಯವಿದೆ. ಪ್ಲಾಸ್ಟಿಕ್‌ ಭೂಮಿಯೊಳಗೆ ಸೇರಿ ವಿಷವಾಗದಂತೆ ತಡೆಯಬೇಕಿದೆ. ಪ್ಲಾಸ್ಟಿಕ್ ನಿಷೇಧ ದೇವಸ್ಥಾನಗಳಿರುವ ಜಾಗದಿಂದಲೇ ಆರಂಭವಾಗಬೇಕು. ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿದಾಗ ಪ್ರಕೃತಿ ಸೌಂದರ್ಯ, ಭೂಮಿಯ ಆರೋಗ್ಯವನ್ನು ಕಾಪಾಡಬಹುದು ಎಂದಿದ್ದಾರೆ.

RELATED ARTICLES

Related Articles

TRENDING ARTICLES