Saturday, November 23, 2024

UPSC ಟಾಪರ್​ ಇಶಿತಾ ಕಿಶೋರ್ ಯಾರು ಗೊತ್ತಾ..?

ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಯುಪಿಎಸ್ಸಿ ಸಿಎಸ್ 2022 ಅಂತಿಮ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು ಇಶಿತಾ ಕಿಶೋರ್ ಮೊದಲ ಸ್ಥಾನ ಪಡೆದುಕೊಂಡಿದ್ಧಾರೆ. 

ಹೌದು,ಯುಪಿಎಸ್ಸಿ ಫಲಿತಾಂಶ ಪ್ರಕಟವಾದಂತೆ ಸೋಶಿಯಲ್ಮೀಡಿಯಾದಲ್ಲಿ ಟ್ರೆಂಡ್ಆಗಿರುವ ಇಶಿತಾ ಕಿಶೋರ್ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ.

ಇಶಿತಾ ಕಿಶೋರ್ ಅರ್ಥಶಾಸ್ತ್ರ ಪದವೀಧರೆ. ಅವರು 2017 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ರಿಸ್ಕ್ಅಡ್ವೈಸರ್ಆಗಿ ಕೆಲ ಕಾಲ ಕೆಲಸ ಮಾಡಿದ್ದರು.  ಸಕ್ರೀಯ ಕ್ರೀಡಾಪಟು ಕೂಡ ಆಗಿರುವ ಈಕೆ ಶಾಲೆಯಲ್ಲೂ ಉತ್ತಮ ಆಲ್ರೌಂಡರ್ಪರ್ಫಾಮರ್ಆಗಿದ್ದರು.

‘ಕಂಡಿದ್ದು ಒಂದೇ ಕನಸು.. ಅದು ನಿಜವಾಗಿದೆ..’ 

ಇಶಿತಾ ಕಿಶೋರ್ ತಮ್ಮ ಇನ್ಸ್ಟಾಗ್ರಾಮ್ಪುಟದಲ್ಲಿ ಒಂದು ಪೋಸ್ಟ್ಅನ್ನು ಹಂಚಿಕೊಂಡಿರುವ ಆಕೆ, ನಾನು ಕಂಡಿದ್ದು ಒಂದೇ ಒಂದು ಕನಸು ಅದೀಗ ನಿಜವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮೂರನೇ ಪ್ರಯತ್ನದಲ್ಲಿ ಇಶಿತಾ ಕಿಶೋರ್‌ UPSC ಪರೀಕ್ಷೆ ಪಾಸ್‌

ಇಶಿತಾ ಕಿಶೋರ್‌ (Ishita Kishore) ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC CSE Exam) ಪಾಸ್‌ ಆಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗೆ ಅರ್ಹತೆ ಪಡೆಯುವ ಮೂರನೇ ಹಂತವಾದ ಸಂದರ್ಶನದ ಸುತ್ತಿಗೆ ಇಶಿತಾ ಕಿಶೋರ್‌ ಮೊದಲ ಬಾರಿಗೆ ಅರ್ಹತೆ ಪಡೆದಿದ್ದರು. ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ, ಇಶಿತಾ ಕಿಶೋರ್‌, ಯುಪಿಎಸ್‌ಸಿ ಪ್ರಿಲಿಮ್ಸ್‌ (Prilims) ಹಂತವನ್ನು ಪಾಸ್‌ ಮಾಡಲೂ ಯಶಸ್ಸು ಕಂಡಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಲು, ಕ್ರಮವಾಗಿ ಪ್ರಿಲಿಮ್ಸ್‌, ಪ್ರಧಾನ ಹಾಗೂ ಸಂದರ್ಶನದ ಸುತ್ತುಗಳಲ್ಲಿ ಪಾಸ್‌ ಆಗಬೇಕಿರುತ್ತದೆ.

RELATED ARTICLES

Related Articles

TRENDING ARTICLES