Monday, February 24, 2025

RRR ಸಿನಿಮಾದ ಖಳನಾಯಕ ರೇ ಸ್ಟೀವನ್ಸನ್ ಇನ್ನಿಲ್ಲ ; ರೇ ನೆನೆದು ಭಾವುಕರಾದ ರಾಜಮೌಳಿ

ಖ್ಯಾತ ಐರಿಶ್ ಕಲಾವಿದ ರೇ ಸ್ಟೀವನ್ಸನ್ ಇಟಲಿಯಲ್ಲಿ ವಿಧಿವಶರಾಗಿದ್ದಾರೆ. ಮೇ 21 ಭಾನುವಾರದಂದು ರೇ ಸ್ಟೀವನ್ಸನ್ ಕೊನೆಯುಸಿರೆಳೆದಿದ್ದಾರೆ. ಇನ್ನೂ ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ಕಾರಣವೇನು…? ಅವರ ಸಾವಿಗೆ ಕಾರಣವೇನು ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಹೌದು, ಗಂಭೀರ ಅನಾರೋಗ್ಯದ ಕಾರಂದಿಂದಾಗಿ ಅವರು ಮೃತಪಟ್ಟಿದ್ದಾರೆ.ಎಂದು ಇಟಲಿಯ ಮ್ಯಾಗಜಿನ್ ರಿಪಬ್ಲಿಕಾ ಬಹಿರಂಗಪಡೆಸಿದೆ. ಇಟಲಿಯಾ ಇಶಿಯಾ ಪೆನಿನ್ಸುಲಾದಲ್ಲಿ ಕ್ಯಾಸಿನೊ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದರು. ಕೊಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಫಲಕಾರಿಯಾಗಿರಲಿಲ್ಲ. ಮೂವರು ಮಕ್ಕಳನ್ನ ರೇ ಸ್ಟೀವನ್ಸನ್ ಅಗಲಿದ್ದಾರೆ.

ಇನ್ನೂ ರೇ ಅಗಲಿರುವ ವಿಚಾರವನ್ನು ರಾಜಮೌಳಿ ಟ್ವಿಟ್ಟರ್​ನಲ್ಲಿ ಭಾವುಕವಾಗಿ ಬರೆದ ಪೋಸ್ಟ್‌ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES