Wednesday, January 22, 2025

ನವೆಂಬರ್ ತಿಂಗಳಲ್ಲಿ ‘ಹಳದಿ ಮಾರ್ಗ ಮೆಟ್ರೋ’ ಸಂಚಾರ ಪ್ರಾರಂಭ

ಬೆಂಗಳೂರು : ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾಮಗಾರಿ ಪ್ರಾರಂಭವಾಗಿದ್ದು, ಇದೇ ನವೆಂಬರ್ ನಲ್ಲಿ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ.

ಹಳದಿ ಮೆಟ್ರೋ ಮಾರ್ಗವು ಬೊಮ್ಮಸಂದ್ರವನ್ನು ಆರ್.ವಿ (RV) ರಸ್ತೆಯೊಂದಿಗೆ ಸಂಪರ್ಕಿಸಲಿದ್ದು, ಸುಮಾರು 19 ಕಿಲೋ ಮೀಟರ್ ಸಂಚರಿಸಲಿದೆ. ಹಳದಿ ಮೆಟ್ರೋ ಮಾರ್ಗದ ಕಾಮಗಾರಿ ಶುರುವಾಗಿದ್ದು ಇದೇ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಮೆಟ್ರೋ ನಿರ್ದೇಶಕರಾದ ಅಂಜುಂ ಪರ್ವೇಜ್ ತಿಳಿಸಿದರು.

ಈ ಮೊದಲು BMRCL ಎರಡು ಹಂತಗಳಲ್ಲಿ ಹಳದಿ ಮಾರ್ಗವನ್ನು ತೆರೆಯಲು ನಿರ್ಧರಿಸಿತ್ತು ಮೊದಲ ಹಂತದಲ್ಲಿ ಇದೇ ಜೂನ್ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ವರೆಗೂ ಹಾಗೂ ಡಿಸೆಂಬರ್ ತಿಂಗಳಲ್ಲಿ ಎರಡನೇ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಆರ್.ವಿ (RV) ರಸ್ತೆಯವರೆಗಿನ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿತ್ತು.

ಇದನ್ನೂ ಓದಿ : ಇನ್ಮುಂದೆ ಮೆಟ್ರೋ ಟಿಕೆಟ್​ಗಾಗಿ ಸರತಿ ಸಾಲುಗಳಲ್ಲಿ ನಿಲ್ಲಬೇಕಿಲ್ಲ.!

ಆದರೆ, ಎರಡು ಹಂತದಲ್ಲಿ ಮೆಟ್ರೋ ಮಾರ್ಗವನ್ನು ಪ್ರಾರಂಭಿಸುವುದರಿಂದ  ಹೆಚ್ಚು ಪ್ರಯಾಣಿಕರನ್ನು ಸೆಳೆಯುವುದು ಕಷ್ಟವೆಂದು ತಿಳಿದು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಹಳದಿ ಮಾರ್ಗವು ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.

3.3 ಕಿ.ಮೀ ಹಳದಿ ಮಾರ್ಗ

ಸಿಲ್ಕ್ಬೋರ್ಡ್, ಎಲೆಕ್ಟ್ರಾನಿಕ್ಸ್ ಸಿಟಿಯ ಸುತ್ತಮುತ್ತ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಳದಿ ಮಾರ್ಗ ನೆರವಾಗಲಿದೆ. ಈ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಸಹ ಒಳಗೊಂಡಿರುತ್ತದೆ. ಎರಡು ಹಂತದ ಸೇತುವೆಯು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 3.3 ಕಿ.ಮೀವರೆಗೆ ಇರುತ್ತದೆ ಎಂದು ತಿಳಿಸಲಾಗಿದೆ.

175 ಕಿ.ಮೀ ಮೆಟ್ರೋ ಜಾಲ

ಒಟ್ಟಿನಲ್ಲಿ ಬೆಂಗಳೂರು ಮೆಟ್ರೋ ಅಧಿಕಾರಿಗಳು 2025ರ ವೇಳೆಗೆ 175 ಕಿಲೋ ಮೀಟರ್ ಮೆಟ್ರೋ ಜಾಲವನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ. ಈ ವರ್ಷದ ಕೊನೆಯಲ್ಲಿ ಹಳದಿ ಮಾರ್ಗದ ಕಾಮಗಾರಿ ಪೂರ್ಣಗೊಂಡು ಸಂಚಾರ ಪ್ರಾರಂಭ ಮಾಡುತ್ತದೆ.

RELATED ARTICLES

Related Articles

TRENDING ARTICLES