Monday, December 23, 2024

ಚೆನ್ನೈ vs ಗುಜರಾತ್ ಕ್ವಾಲಿಫೈಯರ್-1 ಪಂದ್ಯ, ಗುಜರಾತ್ ವಿರುದ್ಧ ಚೆನ್ನೈ ಗೆದ್ದೇ ಇಲ್ಲ..!

ಬೆಂಗಳೂರು : ಐಪಿಎಲ್-2023 ಕ್ವಾಲಿಫೈಯರ್-1ರ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿವೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಲಿದೆ. ಸೋತ ತಂಡವು ಗೆದ್ದ ತಂಡವನ್ನು ಎಲಿಮಿನೇಟರ್‌ನಲ್ಲಿ ಎದುರಿಸಲಿದೆ.

ಎಲ್ಲ ಪಂದ್ಯ ಸೋತಿರುವ ಚೆನ್ನೈ

ಗುಜರಾತ್ ತಂಡ ಚೆನ್ನೈ ತಂಡಕ್ಕಿಂತ ಬಲಶಾಲಿಯಾಗಿ ಕಾಣುತ್ತದೆ. ಎರಡು ತಂಡಗಳ ಹಿಂದಿನ ಕೆಮಿಸ್ಟ್ರಿ ನೋಡುವುದಾದರೆ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದು, ಆಡಿದ್ದ ಎಲ್ಲ ಪಂದ್ಯಗಳಲ್ಲೂ ಗುಜರಾತ್ ಗೆಲುವು ಸಾಧಿಸಿದೆ. ಹೀಗಾಗಿ ಇವತ್ತು ಮತ್ತೆ ಗುಜರಾತ್ ಗೆಲ್ಲುವುದೋ? ಅಥವಾ ಚೆನ್ನೈ ಗೆದ್ದು ಫೈನಲ್ ಗೆ ಕಾಲಿಡುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ : ವಿರಾಟ್ ವೀರಾವೇಶ : ‘ಬ್ಯಾಕ್ ಟು ಬ್ಯಾಕ್ ಶತಕ’ ಸಿಡಿಸಿದ ಕಿಂಗ್ ಕೊಹ್ಲಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಗುಜರಾತ್ ಟೈಟಾನ್ಸ್ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ(ವಿ.ಕೀ), ಶುಭ್​ಮನ್ ಗಿಲ್, ದಾಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಯಶ್ ದಯಾಳ್

ಪ್ಲೇಆಫ್ ಪಂದ್ಯಗಳು ಎಲ್ಲಿ? ಯಾವಾಗ?

ಮೇ 23 : ಕ್ವಾಲಿಫೈಯರ್ 1

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್

ಸ್ಥಳ : ಚೆನ್ನೈ

ಮೇ 24 : ಎಲಿಮಿನೇಟರ್

ಲಕ್ಕೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್

ಸ್ಥಳ : ಚೆನ್ನೈ

ಕ್ವಾಲಿಫೈಯರ್ 2

ಮೇ 26 : ಎಲಿಮಿನೇಟರ್ ಗೆದ್ದವರ ವಿರುದ್ಧ S ಕ್ವಾಲಿಫೈಯರ್ 1 ಸೋತವರು

ಸ್ಥಳ : ಅಹಮದಾಬಾದ್

ಫೈನಲ್ ಪಂದ್ಯ

ಮೇ 28 : ಕ್ವಾಲಿಫೈಯರ್ 1 ವಿಜೇತ ತಂಡದ ವಿರುದ್ಧ ಕ್ವಾಲಿಫೈಯರ್ 2 ವಿಜೇತ ತಂಡ

ಸ್ಥಳ : ಅಹಮದಾಬಾದ್

RELATED ARTICLES

Related Articles

TRENDING ARTICLES