Wednesday, January 22, 2025

ಅಪ್ಪು ಜೊತೆ ನಟಿಸಿದ್ದ ಹನ್ಸಿಕಾಗೆ ‘ನಿತ್ಯ ರಾತ್ರಿ ಡೇಟಿಂಗ್’ಗೆ ಬರುವಂತೆ ಹಿಂಸೆ

ಬೆಂಗಳೂರು : ಸಿನಿಮಾ ರಂಗದಲ್ಲಿ ಕಾಸ್ಟಿಂಗ್​ ಕೌಚ್​ ಪ್ರಕರಣಗಳು ಆಗಾಗ್ಗೆ ಸದ್ದು ಮಾಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.

ಹೌದು, ನಟ ಪುನೀತ್​ ರಾಜ್ ಕುಮಾರ್ ಅಭಿನಯದ ‘ಬಿಂದಾಸ್​’ ಸಿನಿಮಾದಲ್ಲಿ ನಟಿಸಿದ್ದ ನಟಿ ಹನ್ಸಿಕಾ ಮೊಟ್ವಾನಿಗೆ ‘ನಿತ್ಯ ರಾತ್ರಿ ಡೇಟಿಂಗ್​’ಗೆ ಬರುವಂತೆ ನಟನೊಬ್ಬ ಹಿಂಸೆಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ನಟಿ ಹನ್ಸಿಕಾ ಅವರೇ ಟಾಲಿವುಡ್​ನಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಹನ್ಸಿಕಾ, ಕಾಸ್ಟಿಂಗ್​ ಕೌಚ್​ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾ ರಂಗದಲ್ಲಿ ಎಲ್ಲರಂತೆ ನನಗೂ ಕೆಟ್ಟ ಅನುಭವವಾಗಿದೆ. ನಟನೊಬ್ಬ ನನಗೆ ತುಂಬಾ ಕಾಟ ಕೊಟ್ಟಿದ್ದಾನೆ. ಒಳ್ಳೆಯ ಮಾತಿನಿಂದ ಹೇಳಿದರೂ ಕೇಳಲಿಲ್ಲ. ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಒತ್ತಾಯ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ಇನ್ನಿಲ್ಲ

.. ನಟ ಯಾರು?

ಕಾಸ್ಟಿಂಗ್​ ಕೌಚ್​ ಅನುಭವವನ್ನು ಬಿಚ್ಚಿಟ್ಟ ನಟಿ ಹನ್ಸಿಕಾ ಆ.. ತೆಲುಗು ನಟ ಯಾರೆಂಬುದನ್ನು ಬಹಿರಂಗ ಪಡಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಇದು ಭಾರೀ ಚರ್ಚೆಯಾಗುತ್ತಿದೆ. ಸಿನಿಮಾ ರಂಗದಲ್ಲಿನ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುವುದು ಯುವ ನಟಿಯರಿಗೆ ಎಚ್ಚರಿಕೆಯ ಗಂಟೆಯೇ ಸರಿ ಎನ್ನಬಹುದು.

ಇನ್ನೂ ನಟಿ ಹನ್ಸಿಕಾ 2022ರ ಡಿಸೆಂಬರ್​ ನಲ್ಲಿ ಉದ್ಯಮಿ ಸೋಹೈಲ್​ ಕಠೂರಿಯಾ ಅವರನ್ನು ಮದುವೆಯಾಗಿದ್ದರು. ಹನ್ಸಿಕಾ ಅವರು ತಮ್ಮ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯನ್ನೇ ವರಿಸಿದ್ದಾರೆ. ಸದ್ಯ ವೈವಾಹಿಕ ಜೀವನದ ಕಡೆ ಗಮನವಹಿಸಿರುವ ಹನ್ಸಿಕಾ ಇದೀಗ ಟಾಲಿವುಡ್​ನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES