Wednesday, January 22, 2025

‘ಕನ್ನಡಿಗ ಮಯಾಂಕ್ ಸ್ಫೋಟಕ’ ಬ್ಯಾಟಿಂಗ್, ಸಂಕಷ್ಟದ ಸುಳಿಯಲ್ಲಿ ರೋಹಿತ್ ಪಡೆ

ಬೆಂಗಳೂರು : ಕನ್ನಡಿಗ ಮಯಾಂಕ್ ಅಗರ್ವಾಲ್ ಕೊನೆಗೂ ಐಪಿಎಲ್ ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೂಲಕ ಪ್ಲೇಆಫ್ ಕನಸು ಕಾಣುತ್ತಿದ್ದ ಮುಂಬೈಗೆ ಬಿಗ್ ಶಾಕ್ ನೀಡಿದ್ದಾರೆ.

ಆರಂಭಿಕರಾದ ವಿಕ್ರಾಂತ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಮುಂಬೈ ತಂಡಕ್ಕೆ ಮುಳುವಾಯಿತು. ಮುಂಬೈ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಇಬ್ಬರೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿದರು.

ಹೈದರಾಬಾದ್ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿತು. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 201 ರನ್‌ಗಳ ಗುರಿ ನೀಡಿತು. ವಿಕ್ರಾಂತ್ 69 (9 ಬೌಂಡರಿ, 2 ಸಿಕ್ಸರ್) ಮತ್ತು ಮಯಾಂಕ್ ಅಗರ್ವಾಲ್ 83 ರನ್ (8 ಬೌಂಡರಿ, 4 ಸಿಕ್ಸರ್) ಗಳಿಸಿದರು. ಆದರೆ, ಕೊನೆಯಲ್ಲಿ ಹೈದರಾಬಾದ್ ಒಂದರಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ : ಡೆಲ್ಲಿಗೆ ಹೀನಾಯ ಸೋಲು, ‘ಪ್ಲೇಆಫ್ ಗೆ ಲಗ್ಗೆ’ ಇಟ್ಟ ಚೆನ್ನೈ

ಹೈದರಾಬಾದ್ ಪರ ಕ್ಲಾಸೆನ್ (18), ಫಿಲಿಪ್ಸ್(1), ಬ್ರೂಕ್(0) ಬೇಗ ಔಟಾದರು. ಕೊನೆಯಲ್ಲಿ ಹೈದರಾಬಾದ್ 5 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಮುಂಬೈ ಬೌಲರ್‌ಗಳ ಪೈಕಿ ಆಕಾಶ್ 4 ಹಾಗೂ ಜೋರ್ಡಾನ್ 1 ವಿಕೆಟ್ ಪಡೆದರು.

ಮುಂಬೈಗೆ ಆರಂಭಿಕ ಆಘಾತ

ಹೈದರಾಬಾದ್ ನೀಡಿದ್ದ 201 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಇಶಾನ್ ಕಿಶನ್ 12 ಎಸೆತಗಳಲ್ಲಿ 14 ರನ್ ಗಳಿಸಿ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇ ನಲ್ಲಿ ಮುಂಬೈ 1 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ. ಕ್ಯಾಮರೂನ್ ಗ್ರೀನ್ ಹಾಗೂ ನಾಯಕ ರೋಹಿತ್ ಶರ್ಮಾ ಉತ್ತಮ ಜೊತೆಯಾಟ ಪ್ರದರ್ಶಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES