Wednesday, January 22, 2025

ಟಾಸ್ ಗೆದ್ದ ಗುಜರಾತ್, RCB ಎಷ್ಟು ಅಂತರದಿಂದ ಗೆಲ್ಲಬೇಕು?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಪ್ಲೇಆಫ್ ಗೆ ಲಗ್ಗೆ ಇಡಬೇಕು ಎಂದರೆ ಆರ್​ಸಿಬಿ ಗುಜರಾತ್ ತಂಡವನ್ನು ಭಾರೀ ಅಂತರದಿಂದ ಬಗ್ಗು ಬಡಿಯಲೇಬೇಕು.

ಟೂರ್ನಿಯಲ್ಲಿ ಆರ್ ಸಿಬಿ ತಂಡ ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 6 ಪಂದ್ಯದಲ್ಲಿ ಸೋತು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೂ ಹಾಲಿ ಚಾಂಪಿಯನ್ಸ್ ಗುಜರಾತ್ ತಂಡವು 13 ಪಂದ್ಯಗಳಲ್ಲಿ 9ರಲ್ಲಿ ಗೆಲುವು, ಕೇವಲ 4ರಲ್ಲಿ ಸೋಲು ಕಂಡು 18 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್​ಸಿಬಿಗೆ ಗುಜರಾತ್ ವಿರುದ್ಧ ಇಂದಿನ ಪಂದ್ಯ ಅಳಿವು ಉಳಿವಿನ ಪಂದ್ಯವಾಗಿದೆ.

ಆರ್ ಸಿಬಿ ಮುಂದಿರುವ ಸವಾಲು

ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು 16 ಪಾಯಿಂಟ್ಸ್​​ ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತ, ಆರ್​ಸಿಬಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್ ರೇಟ್ ನೊಂದಿಗೆ ಗೆಲುವು ಸಾಧಿಸಿದರೆ 16 ಪಾಯಿಂಟ್ಸ್​ ನೊಂದಿಗೆ ಮುಂಬೈ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಅವಕಾಶವಿದೆ. ಆರ್​ಸಿಬಿ ತಂಡವು ಗುಜರಾತ್ ಗೆ ಬೃಹತ್ ಟಾರ್ಗೆಟ್ ನೀಡಿ, ಕನಿಷ್ಟ 40 ರನ್​ಗಳ ಅಂತರದಿಂದ ಗೆಲ್ಲಲೇಬೇಕು.

ಇದನ್ನೂ ಓದಿ : ಡೆಲ್ಲಿಗೆ ಹೀನಾಯ ಸೋಲು, ‘ಪ್ಲೇಆಫ್ ಗೆ ಲಗ್ಗೆ’ ಇಟ್ಟ ಚೆನ್ನೈ

ಬೆಂಗಳೂರು ತಂಡ

ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್, ಲೊಮ್ರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿ.ಕೀ), ಮೈಕೆಲ್ ಬ್ರೇಸ್‌ವೆಲ್, ವೇಯ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್ ಕುಮಾರ್

 

ಗುಜರಾತ್ ಟೈಟಾನ್ಸ್ ತಂಡ

 ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ದಾಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಯಶ್ ದಯಾಳ್

RELATED ARTICLES

Related Articles

TRENDING ARTICLES