Wednesday, January 22, 2025

IPL 2023 : ಐಪಿಎಲ್​ನಲ್ಲಿಂದು ಡಬಲ್ ಧಮಾಕ ; ಗೆದ್ರೆ ಪ್ಲೇ-ಆಫ್​ ಸ್ಥಾನ ಫಿಕ್ಸ್​…ಸೋತ್ರೆ..?

ಬೆಂಗಳೂರು: ಎಪಿಎಲ್​ನಲ್ಲಿ ಇಂದು ಡಬಲ್​ ಪಂದ್ಯಗಳ ರೋಚಕ ಪಂದ್ಯಗಳು ನಡೆಯಲಿವೆ. ದೆಹಲಿಯಲ್ಲಿ ಡಿಸಿ ವಿರುದ್ಧ ಎಲ್​ಎಸ್​ಜಿ ಕಣಕ್ಕಿಳಿದರೆ ಕೆಕೆಆರ್​ ವಿರುದ್ಧ ಎಲ್​ಎಸ್​ಜಿ ಆಡಲಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಎಲ್​ಎಸ್​ಜಿ ಗೆದ್ದರೆ ಅಗ್ರ 2ಸ್ಥಾನಗಳನ್ನು ಪಡೆದು ಪ್ಲೇ-ಆಫ್​ಗೆ ಎಂಟ್ರಿಕೊಡಲಿವೆ.

ಹೌದು,ಇಂದು ವೇಳೆ ಸೋತರೆ, ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಸೋಲಿಗಾಗಿ ಪ್ರಾರ್ಥನೆ ಮಾಡಬೇಕಿದೆ. ಹೀಗಾಗಿ ಇವೆರಡು ಪಂದ್ಯದ ಫಲಿತಾಂಶದ ಮೇಲೆ ಎಲ್ಲರ ಗವನವಿದ್ದುಯ, ಹಲವು ಲೆಕ್ಕಚಾರಗಳಿಗೆ ಕಾರಣವಾಗಿದೆ.

ಡೆಲ್ಲಿ-ಚೆನ್ನೈ

ಡೆಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಿತ್ತು. ಆದರೆ ಟೂರ್ನಿಯಿಂದ ಹೊರಬಿದ್ದಾಗಿದೆ. ಆರಂಭದಲ್ಲಿ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿರಲಿಲ್ಲ. ಆದರೆ, ಈಗ ವಾರ್ನರ್ ಕೂಡ ಬೇಗನೆ ಔಟಾಗುತ್ತಿದ್ದಾರೆ. ಪೃಥ್ವಿ ಶಾ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ರಿಲೀ ರುಸ್ಸೊ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಮಿಚೆಲ್ ಮಾರ್ಶ್ ನೆರವಾಗುತ್ತಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಡೆಲ್ಲಿ ಮಾರಕವಾಗಿಲ್ಲ. ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕು.

RELATED ARTICLES

Related Articles

TRENDING ARTICLES