Monday, December 23, 2024

ಗ್ಯಾರಂಟಿ ಜಾರಿ ಖಚಿತ ; ಡಾ ಜಿ.ಪರಮೇಶ್ವರ್

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಕೈ ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಖಚಿತ ಎಂದು ಇಂದು ಸಚಿವರಾಗಿ  ಪ್ರಮಾಣವಚನ ಸ್ವೀಕರಿಸಲಿರುವ ಡಾ ಜಿ.ಪರಮೇಶ್ವರ್ ಹೇಳಿದ್ದಾರೆ.

ಹೌದು, ರಾಜ್ಯದ ಜನ ಬಹಳಷ್ಡು ನಿರೀಕ್ಷೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಜನರಿಗೆ ತಿಳಿಸಿದ್ದೇವೆ. ಐದೂ ಗ್ಯಾರಂಟಿ ಜಾರಿ ಮಾಡುವುದು ಬಹಳ ಪ್ರಾಮುಖ್ಯ. ಈಗ ಸದ್ಯದ ಸ್ಥಿತಿಯಲ್ಲಿ ಮೊದಲ ಕ್ಯಾಬಿನೆಟ್ ನಲ್ಲಿ ಐದೂ ಗ್ಯಾರಂಟಿ ಗಳನ್ನು ಅಪ್ರೂವ್ ಮಾಡ್ತೇವೆ ಅಂತ ಹೇಳಿದ್ವಿ. ಅದನ್ನು ಇಂದೇ ಮಾಡುವ ಪ್ರಯತ್ನ ಮಾಡ್ತೇವೆ.

ನನಗೂ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಎಐಸಿಸಿ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸ್ತೇನೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಡಾ.ಜಿ ಪರಮೇಶ್ವರ ಸಂತಸ ವ್ಯಕ್ತಪಡಿಸಿದ್ದಾರೆ.

ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟು ಕೆಲಸ ಮಾಡಬೇಕಿದೆ. ನನಗೆ ಯಾವುದೂ ಬೇಸರ ಇಲ್ಲ. ಎಲ್ಲವನ್ನು ಸಂತೋಷದಿಂದಲೇ ಸ್ವೀಕಾರ ಮಾಡ್ತೇನೆ. ಗ್ಯಾರಂಟಿ ಜಾರಿಗೆ ಅನುಷ್ಟಾನ ಸಂದರ್ಭದಲ್ಲಿ ಕೆಲವು ನಿಯಮ ಮಾಡಬೇಕಾಗುತ್ತದೆ ಎಂದರು.

RELATED ARTICLES

Related Articles

TRENDING ARTICLES