Wednesday, January 22, 2025

‘ಕಾನ್ವೆ-ಗಾಯಕ್ವಾಡ್ ವಿಧ್ವಂಸಕ’ ಬ್ಯಾಟಿಂಗ್ : ಡೆಲ್ಲಿಗೆ 224 ರನ್ ಗಳ ಬೃಹತ್ ಟಾರ್ಗೆಟ್

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಆರಂಭಿಕರಾದ ರುತುರಾಜ್ ಗಾಯಕ್ವಾಡ್ 79 (50) ಹಾಗೂ ಡೆವೊನ್ ಕಾನ್ವೆ 87 (52) ರನ್ ಗಳ ಉತ್ತಮ ಜೊತೆಯಾಟ ಡೆಲ್ಲಿ ತಂಡಕ್ಕೆ ಬಿಗ್ ಶಾಕ್ ನೀಡಿತು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಇನ್ನರೂ ಸ್ಫೋಟಕ್ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಚೆನ್ನೈ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿತು. ಚೆನ್ನೈ ಬ್ಯಾಟರ್ ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದೆ.

ಇದನ್ನೂ ಓದಿ : 4 ವರ್ಷಗಳ ಬಳಿಕ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 79, ಡೆವೊನ್ ಕಾನ್ವೆ 87, ಶಿವಂ ದುಬೆ 22, ರವೀಂದ್ರ ಜಡೇಜಾ ಅಜೇಯ 20 ಹಾಗೂ ನಾಯಕ ಎಂ.ಎಸ್ ಧೋನಿ ಅಜೇಯ 5 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹಮ್ಮದ್, ಎನ್ರಿಕ್ ನೋಕಿಯಾ ಹಾಗೂ ಚೇತನ್ ಸಕಾರಿಯಾ ತಲಾ ಒಂದು ವಿಕೆಟ್ ಪಡೆದರು.

ಭರ್ಜರಿ ಜೊತೆಯಾಟ

ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಅರುಣ್ ಜೇಟ್ಲಿ ಕ್ರೀಡಾಂಗಣದ ಅಷ್ಟ ದಿಕ್ಕುಗಳಿಗೂ ಬೌಂಡರಿ, ಸಿಕ್ಸರ್ ಸಿಡಿಸಿದರು. ಗಾಯಕ್ವಾಡ್ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿದರು. ಕಾನ್ವೆ 11 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು. ಆ ಮೂಲಕ ಮುರಿಯದ 141 ರನ್ ಗಳ ಜೊತೆಯಾಟ ಪ್ರದರ್ಶಿಸಿದರು. ಬಳಿಕ ಬಂದ ಶಿವಂ ದುಬೆ 3 ಸಿಕ್ಸರ್ ಹಾಗೂ ಜಡೇಜಾ 3 ಬೌಂಡರಿ, 1 ಸಿಕ್ಸರ್ ಸಿಡಿಸಿದರು.

RELATED ARTICLES

Related Articles

TRENDING ARTICLES