Wednesday, January 22, 2025

ಇವರೇನು ‘ತಾಲಿಬಾನಿಗಳಲ್ಲ, ದೇಶದ್ರೋಹಿ’ ಕೆಲಸ ಮಾಡಿಲ್ಲ : ಶಾಸಕ ಯತ್ನಾಳ್ ಕಿಡಿ

ಬೆಂಗಳೂರು : ಇವರು ತಾಲಿಬಾನಿಗಳಲ್ಲ, ದೇಶದ್ರೋಹಿ ಕೆಲಸ ಮಾಡಿದವರಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೊಲೀಸ್ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪುತ್ತೂರಿಗೆ ಆಗಮಿಸಿ, ಪೊಲೀಸ್ ದೌರ್ಜನ್ಯದಿಂದ ಆಸ್ಪತ್ರೆಗೆ ದಾಖಲಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಪೊಲೀಸರ ಅಮಾನವೀಯ ಕೃತ್ಯ ತಲೆ ತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಮನಸೋ ಇಚ್ಛೆ ಹೊಡೆಯೋ ಅಧಿಕಾರ ಪೊಲೀಸರಿಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಕಲಿ ಮತದಾನ : ಕಾರ್ಕಳ ಠಾಣೆಯಲ್ಲಿ ದೂರು ದಾಖಲು

ಈ ಭಾಗದ ಜನರಿಗೆ ಘಟನೆ ಹಿಂದೆ ಏನಿದೆ ಅಂತ ಗೊತ್ತಿದೆ. ಆ ಆಳಕ್ಕೆ ನಾವು ಹೋಗಲ್ಲ. ಡಿವೈಎಸ್ಪಿ ಕೋಣೆಯಲ್ಲಿ ಕಾರ್ಯಕರ್ತರನ್ನು ಹೊಡೆಯಲಾಗಿದೆ. ಇದು ಪೊಲೀಸ್ ಇಲಾಖೆಗೆ ಗೌರವ ತರೋ ಕೆಲಸ ಅಲ್ಲ. ಇವರು ತಾಲಿಬಾನಿಗಳಲ್ಲ, ದೇಶದ್ರೋಹಿ ಕೆಲಸ ಮಾಡಿದವರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ಆದರೆ, ದೂರು ಬಂದಾಗ ತನಿಖೆ ಮಾಡಬೇಕು. ಬಿಜೆಪಿ ಕಾರ್ಯಕರ್ತರನ್ನು ಹೊಡೆಯೋ ಅಧಿಕಾರ ಅವರಿಗಿಲ್ಲ. ಇವರು ಕೊಲೆ ಮಾಡಿಲ್ಲ, ದೇಶ ವಿರೋಧಿ ಕೆಲಸ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಬೇಕು, ಕೆಳ ಹಂತದ ಸಿಬ್ಬಂದಿ ಜೊತೆ ಡಿವೈಎಸ್ಪಿ ಮೇಲೂ ಕ್ರಮ ಆಗಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES