Wednesday, January 22, 2025

ಕಾಂಗ್ರೆಸ್ ನಿಜ ಮುಖ ಬಯಲಾಗಿದೆ : ವಿಜಯೇಂದ್ರಗೆ ಆಹಾರವಾದ ‘ಕೈ’ ನಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಗೆಲುವಿನ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಿಜ ಮುಖ ಬಟಾ ಬಯಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿ.ವೈ ವಿಜಯೇಂದ್ರ, ಅಧಿಕಾರದ ಲಾಭಕ್ಕಾಗಿ ಲಿಂಗಾಯತ ಹೆಸರನ್ನು ಬಳಸಿಕೊಂಡ ಕಾಂಗ್ರೆಸ್ ಪಕ್ಷದ ನಾಯಕರು ಲಿಂಗಾಯತರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ನೀಡಿ ಎಂಬ ಮಾತು ಕೇಳಿಬಂದಾಗ ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಿಂಗಾಯತರಿಗೆ ನ್ಯಾಯ ಒದಿಗಿಸಿಲ್ಲ

ಚುನಾವಣೆಯಲ್ಲಿ 39 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದರು ಸರಿಯಾದ ಸ್ಥಾನಕ್ಕಾಗಿ ಯಾವುದೇ ನಾಯಕ ತಮ್ಮ ಧ್ವನಿ ಎತ್ತದಿರುವುದು ವಿಪರ್ಯಾಸ. ಕಾಂಗ್ರೆಸ್ ​ನಾಯಕರ ನಿಜ ಮುಖ ಬಯಲಾಗಿದೆ. ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್​ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್​ ನ್ಯಾಯ ಒದಿಗಿಸಿಲ್ಲ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ನಾವು ಮತ್ತೆ ‘ರಾಜ್ಯದಲ್ಲಿ ಪುಟಿದೇಳುತ್ತೇವೆ’ : ಬಸವರಾಜ ಬೊಮ್ಮಾಯಿ

ಸುಳ್ಳಿನ ಭರವಸೆಯೊಂದಿಗೆ ಗೆಲುವು

ಜಗಜ್ಯೋತಿ ಬಸವೇಶ್ವರರು ಹಾಗೂ ಅವರ ಬೋಧನೆಗಳನ್ನು ನಿಜವಾಗಿಯೂ ಪಾಲಿಸುವುದು ಬಿಜೆಪಿ ಪಕ್ಷ ಮಾತ್ರ. ಬಸವಣ್ಣನವರ ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ. ಕಾಂಗ್ರೆಸ್‌ ಪಕ್ಷ ಸುಳ್ಳಿನ ಭರವಸೆಯೊಂದಿಗೆ ಗೆಲುವು ಸಾಧಿಸಿದೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ನ ನಿಜ ಬಣ್ಣದ ಬಗ್ಗೆ ರಾಜ್ಯದ ಜನರು ಶೀಘ್ರದಲ್ಲಿಯೇ ಅರಿತುಕೊಳ್ಳಲಿದ್ದಾರೆ. ಭಾರತ ತಾಯಿಯಾಗಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರೊಂದಿಗೆ ನಿಲ್ಲಲಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES