Monday, December 23, 2024

ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ, ಇಂದೇ ‘ಪ್ಲೇ ಆಫ್ ಕನಸು’ ನಿರ್ಧಾರ?

ಬೆಂಗಳೂರು : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ಫಾಫ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಪ್ಲೇ ಆಫ್​ ರೇಸ್​ನಲ್ಲಿ ಜೀವಂತವಾಗಿರಬೇಕು ಎಂದರೆ ಆರ್​ಸಿಬಿ ಹೈದರಾಬಾದ್ ತಂಡವನ್ನು ಬಗ್ಗು ಬಡಿಯಲೇಬೇಕು.

ಟೂರ್ನಿಯಲ್ಲಿ ಆರ್ ಸಿಬಿ ತಂಡ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 6 ಪಂದ್ಯದಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೂ ಹೈದರಾಬಾದ್ ತಂಡವು 12 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 8ರಲ್ಲಿ ಸೋಲು ಕಂಡು 08 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿಗೆ ಹೈದರಾಬಾದ್ ವಿರುದ್ಧ ಇಂದಿನ ಪಂದ್ಯ ಅಳಿವು ಉಳಿವಿನ ಪಂದ್ಯವಾಗಿದೆ.

ಇದನ್ನೂ ಓದಿ : RCB ತೂಫಾನ್ ಬೌಲಿಂಗ್, 59 ರನ್ ಗೆ ರಾಜಸ್ಥಾನ್ ಆಲೌಟ್ : ಆರ್​ಸಿಬಿಗೆ 112 ರನ್ ಜಯ

ಬೆಂಗಳೂರು ತಂಡ

ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್, ಲೊಮ್ರೋರ್, ಅನುಜ್ ರಾವತ್(ವಿ.ಕೀ), ಶಹಬಾಜ್ ಅಹಮ್ಮದ್,  ಮೈಕೆಲ್ ಬ್ರೇಸ್‌ವೆಲ್, ವೇಯ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ಹೈದರಾಬಾದ್ ತಂಡ

ಏಡೆನ್ ಮಾರ್ಕ್ರಾಮ್(ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಕ್ ಕ್ಲಾಸೆನ್(ವಿ.ಕೀ.), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ

RELATED ARTICLES

Related Articles

TRENDING ARTICLES