Monday, December 23, 2024

‘ಖಾತೆ ಕ್ಯಾತೆ’ ಶುರು : ಇವರೇ ಮಂತ್ರಿಗಿರಿ ರೇಸ್ ನಲ್ಲಿರುವ ‘ಕೈ’ ಘಟಾನುಘಟಿ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸ್ವಲ್ಪ ನಿರಾಳವಾಗಿದೆ.

ಸಿಎಂ ಕ್ಯಾತೆ ಬಳಿಕ ಇದೀಗ ಖಾತೆ ಕ್ಯಾತೆ ಶುರುವಾಗಿದೆ. ಸಚಿವ ಸಂಪುಟ ರಚನೆ ಸಿದ್ದು ಅಂಡ್ ಟೀಂಗೆ ತಲೆನೋವಾಗಿ ಪರಿಣಮಿಸಲಿದೆ. ಸಚಿವ ಸಂಪುಟ ಸೇರಲು ಕಾಂಗ್ರೆಸ್‌ ಪಕ್ಷದ ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಿಎಂ, ಡಿಸಿಎಂ ಹುದ್ದೆಗೆ ಆಯ್ಕೆಯಾಗಿದ್ದು ಇವರ ಬಳಿ ಯಾವ ಖಾತೆ ಉಳಿಯಲಿದೆ ಎಂಬುದರ ಮೇಲೆ ಇನ್ನಿತರ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡುತ್ತಾ? ಅಥವಾ ಅನುಭವದ ಆಧಾರದ ಮೇಲೆ ಮಣೆ ಹಾಕುತ್ತಾ? ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ : ಡಿಸಿಎಂ ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು : ಡಾ.ಜಿ ಪರಮೇಶ್ವರ್

ಸಂಭಾವ್ಯ ಸಚಿವರ ಪಟ್ಟಿ

  • ಸಿದ್ದರಾಮಯ್ಯ (ಕುರುಬ)
  • ಡಿ.ಕೆ ಶಿವಕುಮಾರ್ (ಒಕ್ಕಲಿಗ)
  • ಬಿ.ಕೆ ಹರಿಪ್ರಸಾದ್ (ಬಿಲ್ಲವ)
  • ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
  • ಯು.ಟಿ ಖಾದರ್ (ಮುಸ್ಲಿಂ)
  • ದಿನೇಶ್ ಗುಂಡೂರಾವ್ (ಬ್ರಾಹ್ಮಣ)
  • ಕೆಜೆ ಜಾರ್ಜ್ (ಕ್ರೈಸ್ತ)
  • ಜಗದೀಶ್ ಶೆಟ್ಟರ್ (ಲಿಂಗಾಯತ)
  • ರಾಮಲಿಂಗಾ ರೆಡ್ಡಿ (ಒಕ್ಕಲಿಗ ರೆಡ್ಡಿ)
  • ಎಂ.ಬಿ ಪಾಟೀಲ್ (ಲಿಂಗಾಯತ)
  • ಡಾ. ಜಿ ಪರಮೇಶ್ವರ (ಎಸ್ಸಿ)
  • ಕೃಷ್ಣ ಬೈರೇಗೌಡ (ಒಕ್ಕಲಿಗ)
  • ಪ್ರಿಯಾಂಕ್ ಖರ್ಗೆ (ಎಸ್ಸಿ)
  • ಲಕ್ಷ್ಮೀ ಹೆಬ್ಬಾಳ್ಕರ್ (ಲಿಂಗಾಯತ)
  • ತುಕರಾಮ್ (ಎಸ್ಟಿ)
  • ನಾಗೇಂದ್ರ (ಎಸ್ಟಿ)
  • ಲಕ್ಷಣ ಸವದಿ (ಲಿಂಗಾಯತ)
  • ರಾಘವೇಂದ್ರ ಹಿಟ್ನಾಳ್ (ಕುರುಬ)
  • ಪುಟ್ಟರಂಗ ಶೆಟ್ಟಿ (ಉಪ್ಪಾರ )
  • ಸಂತೋಷ್ ಲಾಡ್(ಮರಾಠಿ)
  • ಎಚ್.ಕೆ ಪಾಟೀಲ್ (ರೆಡ್ಡಿ ಲಿಂಗಾಯತ)
  • ಶಿವಲಿಂಗೇಗೌಡ (ಒಕ್ಕಲಿಗ)
  • ಮಧು ಬಂಗಾರಪ್ಪ (ಈಡಿಗ)
  • ಟಿ.ಬಿ ಜಯಚಂದ್ರ (ಒಕ್ಕಲಿಗ)
  • ರಾಮಲಿಂಗಾ ರೆಡ್ಡಿ (ರೆಡ್ಡಿ)
  • ಕೆ. ಎಚ್ ಮುನಿಯಪ್ಪ/ ರೂಪಾ ಶಶಿಧರ್ (ಎಸ್ಸಿ)
  • ಶಿವಾನಂದ ಪಾಟೀಲ್ (ಲಿಂಗಾಯತ)
  • ಈಶ್ವರ್ ಖಂಡ್ರೆ (ಲಿಂಗಾಯತ)
  • ಟಿ.ಡಿ ರಾಜೇಗೌಡ (ಒಕ್ಕಲಿಗ)
  • ವಿನಯ್ ಕುಲಕರ್ಣಿ(ಲಿಂಗಾಯತ)
  • ಎಂ ಕೃಷ್ಣಪ್ಪ (ಒಕ್ಕಲಿಗ)
  • ಶಿವರಾಜ್ ತಂಗಡಗಿ (ಭೋವಿ)
  • ಅಜಯ್ ಧರ್ಮಸಿಂಗ್ (ರಜಪೂತ)
  • ಸತೀಶ್ ಜಾರಕಿಹೊಳಿ (ಎಸ್ಟಿ)

RELATED ARTICLES

Related Articles

TRENDING ARTICLES