Monday, December 23, 2024

ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ : ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ?

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಧರ್ಮಶಾಲಾದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಪಂದ್ಯನಡೆಯುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್ ಕಿಂಗ್ಸ್​ ಗೆಲುವಿಗಾಗಿ ಸೆಣಸಲಿವೆ.

ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್​ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 12 ಪಂದ್ಯದಲ್ಲಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ, ಡೆಲ್ಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್ (ವಿ.ಕೀ.), ರಿಲೆ ರೊಸ್ಸೊ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಯಶ್ ಧೂಲ್, ಕುಲದೀಪ್ ಯಾದವ್, ಎನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್

ಇದನ್ನೂ ಓದಿ : ಶುಭ್ಮನ್ ಗಿಲ್ ‘ಸಿಡಿಲಬ್ಬರದ ಸೆಂಚುರಿ’ : ಹೈದರಾಬಾದ್ ಗೆ 189 ರನ್ ಟಾರ್ಗೆಟ್

ಪಂಜಾಬ್ ಕಿಂಗ್ಸ್ ತಂಡ

ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್ದೀಪ್ ಸಿಂಗ್

ಟೂರ್ನಿಯಲ್ಲಿ 6 ಶತಕ ದಾಖಲು

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಈವರೆಗೆ 6 ಶತಕಗಳು ದಾಖಲಾಗಿವೆ. ಈ ಪೈಕಿ ಭಾರತೀಯ ಆಟಗಾರರು ಭಾರೀ ಸದ್ದು ಮಾಡುತ್ತಿದ್ದಾರೆ. ಕೇವಲ ಒಂದು ಶತಕ ಮಾತ್ರ ವಿದೇಶಿ ಆಟಗಾರ ಸಿಡಿಸಿದ್ದರೆ, ಉಳಿದ 5 ಶತಕಗಳು ಭಾರತೀಯ ಬ್ಯಾಟರ್ ಗಳ ಹೆಸರಿನಲ್ಲಿದೆ.

ಶತಕ ಸಿಡಿಸಿದ ಸರದಾರರು

  • ಯಶಸ್ವಿ ಜೈಸ್ವಾಲ್(124)
  • ವೆಂಕಟೇಶ್ ಅಯ್ಯರ್(104)
  • ಸೂರ್ಯಕುಮಾರ್ ಯಾದವ್(103*)
  • ಪ್ರಬ್ ಸಿಮ್ರನ್ ಸಿಂಗ್(103)
  • ಶುಭ್ ಮನ್ ಗಿಲ್(101)
  • ಹ್ಯಾರಿ ಬ್ರೂಕ್(100*)

RELATED ARTICLES

Related Articles

TRENDING ARTICLES