ಬೆಂಗಳೂರು : ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿ ಹಾಗೂ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ(ಮಾಜಿ ಸಿಎಂ). ಉಚಿತ ‘ಭಾಗ್ಯ’ಗಳ ಸರದಾರ ಕೂಡ ಹೌದು. ಹೀಗಾಗಿಯೇ ಸಿಎಂ ರೇಸ್ ನಲ್ಲಿ ಸಿದ್ದು ಹೆಸರು ಮುಂಚೂಣಿಯಲ್ಲಿದೆ.
ದೇವರಾಜ ಅರಸ್ ಅವರನ್ನು ಬಿಟ್ಟರೆ 5 ವರ್ಷ ಪೂರ್ಣವಾಗಿ ಅಧಿಕಾರ ಪೂರೈಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ. ಪ್ರಸ್ತುತ ಮತ್ತೊಮ್ಮೆ ಸಿಎಂ ಪಟ್ಟ ಏರುವ ಕನಸು ಕಾಣುತ್ತಿದ್ದಾರೆ ಮಾಸ್ ಲೀಡರ್ ಸಿದ್ದರಾಮಯ್ಯ.
ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಹೇಗಿತ್ತು? ಈವರೆಗೆ ಅವರು ಯಾವ? ಯಾವ ಸ್ಥಾನಗಳನ್ನು ಅಲಂಕರಿಸಿದ್ದರು. ಇಲ್ಲಿದೆ ಆ ಕುರಿತ ಮಾಹಿತಿ.
ಇದನ್ನೂ ಓದಿ : ಕನ್ಫರ್ಮ್ : ನಾಳೆ ಬೆಂಗಳೂರಿನಲ್ಲೇ ‘ರಾಜ್ಯದ ಮುಂದಿನ ಸಿಎಂ’ ಘೋಷಣೆ
ಸಿದ್ದರಾಮಯ್ಯ ಜನನ : ಆಗಸ್ಟ್ 12, 1948
ಸ್ಥಳ : ಸಿದ್ದರಾಮನ ಹುಂಡಿ, ವರುಣಾ ಹೋಬಳಿ, ಮೈಸೂರು ಜಿಲ್ಲೆ
ತಂದೆ : ಸಿದ್ಧರಾಮೇಗೌಡ
ತಾಯಿ : ಬೋರಮ್ಮ
ಸಿದ್ದರಾಮಯ್ಯ ರಾಜಕೀಯ ಜರ್ನಿ
1983 : ಮೊದಲ ಗೆಲುವು-ಕನ್ನಡ ಕಾವಲು ಸಮಿತಿ ಅಧ್ಯಕ್ಷ
1985 : ಪಶುಸಂಗೋಪನೆ ಸಚಿವ(1988 ವರೆಗೆ)
1994 : ಹಣಕಾಸು ಸಚಿವ
1996 : ಉಪಮುಖ್ಯಮಂತ್ರಿ
2004 : ಉಪಮುಖ್ಯಮಂತ್ರಿ
2006 : ವಿಪಕ್ಷ ನಾಯಕ
2008 : ವಿಪಕ್ಷ ನಾಯಕ
2013 : ಮುಖ್ಯಮಂತ್ರಿ
2018 : ಸಮನ್ವಯ ಸಮಿತಿ ಅಧ್ಯಕ್ಷ
2019 : ವಿಪಕ್ಷ ನಾಯಕ (2023ರವರೆಗೆ)
2014ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಸೇರಿದ ಬಳಿಕ 2014ರಲ್ಲಿ ಬಹುಮತದೊಂದಿದೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2014ರಿಂದ 2018ರವರೆಗೆ ಪೂರ್ಣಾವಧಿ ಸಿಎಂ ಆಗಿ ಕಾರ್ಯ ನಿರ್ವಹಿಸಿದರು.
‘ಭಾಗ್ಯ‘ಗಳ ಸರದಾರ ಸಿದ್ದು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉಚಿತ ಭಾಗ್ಯಗಳನ್ನು ಜಾರಿಗೆ ತಂದರು. ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು. ಇದರ ಜೊತೆಗೆ ಇಂದಿರಾ ಕ್ಯಾಂಟೀನ್ ಆರಂಭಿಸಿದರು.