ಇಂದಿನ ಪೀಳಿಗೆಯೂ ಅತಿ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಹಜ. ಅಂದ್ರೆ ತಮ್ಮ ಮಾನಸಿಕ ಒತ್ತಡವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಳ್ಳುವುದು ಕೂಡ ಅನಿವಾರ್ಯ. ನಮ್ಮ ನಿತ್ಯ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳದಿದ್ದರೆ ಅನಾರೋಗ್ಯ ಸಂಭವಿಸುವುದು ಕೂಡ ಸಹಜ ಎಂಬ ಅರಿವು ಇರಬೇಕು.
ಹೌದು,ಅತಿಯಾದ ಮಾನಸಿಕ ಒತ್ತಡ ಮನುಷ್ಯನನ್ನು ಕೇವಲ ಮಾನಸಿಕವಾಗಿ ಮಾತ್ರ ಕುಗ್ಗಿಸುವುದು ಅಲ್ಲದೆ ದೈಹಿಕವಾಗಿ ಕೂಡ ಆಲಸ್ಯ, ನಿದ್ರಾಹೀನತೆ ಮತ್ತು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಕೆಲವೊಂದು ಅನಾರೋಗ್ಯಕರ ಹವ್ಯಾಸಗಳು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಮಾನಸಿಕ ತೊಂದರೆಯನ್ನು ಹೆಚ್ಚು ಮಾಡುವ ಸಾಧ್ಯತೆ ಕೂಡ ಇರುತ್ತದೆ.ಹಾಗಿದ್ದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ.. ನಿಮ್ಮ ಒತ್ತಡ ಕಡಿಮೆಯಾಗುತ್ತದೆ.
- ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಶಾಂತ ರೀತಿಯಲ್ಲಿ ಇರಿವುದನ್ನು ಮೊದಲು ಕಲಿಯಬೇಕು.
- ಯಾವುಗಲೂ ಸಕಾರಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ
- ನಿಮ್ಮ ಜೀವನದಲ್ಲಿ ಆನಂದದಿಂದ ಇರುವುದನ್ನು ಕಲಿಯಿರಿ
- ದೇಹಕ್ಕೆ ವಿಶ್ರಾಂತಿ ಮುಖ್ಯ
- ಪ್ರವಾಸವನ್ನು ಮಾಡಿ
- ಪ್ರಾರ್ಥನೆ ಮಾಡಿವುದರಿಂದ ಕೂಡ ಒತ್ತಡ ಕಡಿಮೆಯಾಗುತ್ತದೆ.
- ನಿಮಗೆ ಇಷ್ಟವಾದ ಸಂಗೀತವನ್ನು ಆಲಿಸಿ..
- ಮಾನಸಿಕ ಒತ್ತಡ ಹೆಚ್ಚಾಗುವುದು ಜೊತೆಗೆ ಹೃದಯದ ಕಾಯಿಲೆ, ಬೆನ್ನು ನೋವು, ಮೈಗ್ರೇನ್ ತಲೆ ನೋವು ಕಂಡು ಬರುವುದು, ರೋಗ ನಿರೋಧಕ ಶಕ್ತಿಯ ಕೊರತೆ ಉಂಟಾಗುವುದು ಮತ್ತು ಕ್ಯಾನ್ಸರ್ ಸಮಸ್ಯೆ ಕಾಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಉತ್ತಮ ಎನಿಸುವ ಕೆಲವು ಆಹಾರ ಪದಾರ್ಥಗಳು
- ಸಾಲ್ಮನ್ ಸೇವನೆ ಮಾಡಿ
- ಟೊಮೆಟೊ ಹಣ್ಣುಗಳ ಬಳಕೆ ಮಾಡಿ
- ದಪ್ಪಮೆಣಸಿನಕಾಯಿ ತಿನ್ನಿ
- ಡಾರ್ಕ್ ಚಾಕ್ಲೇಟ್ ಸೇವನೆ ಮಾಡಿ
- ಪಾಲಕ್ ಸೊಪ್ಪು ಸೇರಿಸಿ ಸೇವಿಸಿ
ಹೀಗೆ ನಾವು ನಿತ್ಯ ಬದುಕಇನಲ್ಲಿ ಬರುವ ಒತ್ತಡವನ್ನು ಕಡಿಮೆ ಮಾಡಬಹುದು….