Monday, December 23, 2024

ದೆಹಲಿಯಲ್ಲಿ ಆಪ್ತ ಶಾಸಕರೊಂದಿಗೆ ‘ಡಿಕೆಶಿ ರಹಸ್ಯ’ ಸಭೆ

ಬೆಂಗಳೂರು : ಕರುನಾಡ ಮುಂಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವ ಟ್ರಬಲ್ ಶೂಟರ್, ಸಹೋದರ ಡಿ.ಕೆ ಸುರೇಶ್ ಅವರ ಕಾವೇರಿ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆ ಡಿ.ಕೆ ಶಿವಕುಮಾರ್ ಸಭೆ ವಿಫಲವಾದ ನಂತರ ಡಿಕೆಶಿ ತಮ್ಮ ಸಹೋದರ ಡಿಕೆ ಸುರೇಶ್ ಅವರ ಅಪಾರ್ಟ್‌ಮೆಂಟ್‌ಗೆ ಮರಳಿದ್ದಾರೆ.

ತಮ್ಮ ಬೆಂಬಲಿಗರು ಮತ್ತು ಹೊಸದಾಗಿ ಆಯ್ಕೆಯಾದ ಆಪ್ತ ಶಾಸಕರ ಜೊತೆ ಡಿ.ಕೆ ಶಿವಕುಮಾರ್ ಅವರು ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ. ಬೇಳೂರು ಗೋಪಾಲಕೃಷ್ಣ, ಹೆಚ್‌ಸಿ ಬಾಲಕೃಷ್ಣ, ವೀರೇಂದ್ರ ಪಪ್ಪಿ, ಎಂಎಲ್‌ಸಿ ರವಿ, ಪರಾಜಿತ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್‌ ಸೇರಿದಂತೆ ಹಲವು ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಉಲ್ಟಾ ಹೊಡೆದ ‘ಕೈ’ ಹೈಕಮಾಂಡ್ : ‘ಸಿದ್ದು ಸಿಎಂ’ ಘೋಷಣೆಗೆ ಬಿಗ್ ಟ್ವಿಸ್ಟ್

ಎಲ್ಲವೂ ಬೋಗಸ್ ಸುದ್ದಿ

ಸಿದ್ದರಾಮಯ್ಯ ಸಿಎಂ, ನಾಳೆಯೇ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಸುದ್ದಿ ಕುರಿತು ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಯಾವ ಸುದ್ದಿಯಲ್ಲೂ ಸತ್ಯಾಂಶವಿಲ್ಲ. ಎಲ್ಲವೂ ಬೋಗಸ್ ಸುದ್ದಿ. ಅಂತಹ ಸುದ್ದಿಗಳನ್ನು ಬಿತ್ತರಿಸಿ ನಿಮ್ಮ ಸಂಸ್ಥೆಯ ಮರ್ಯಾದೆ ಹಾಳು ಮಾಡಿಕೊಳ್ಳಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES