Wednesday, January 22, 2025

ಟಾಸ್ ಗೆದ್ದ ಮುಂಬೈ ಬೌಲಿಂಗ್ : ಮುಂಬೈ ಗೆಲುವಿಗೆ RCB ಫ್ಯಾನ್ಸ್ ಪ್ರಾರ್ಥನೆ

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ಸ್ ಮುಂಬೈ ಹಾಗೂ ಲಕ್ನೋ ನಡುವೆ ಪಂದ್ಯ ನಡೆಯುತ್ತಿದೆ. ಆದರೆ, ಆರ್ ಸಿಬಿ ತಂಡ ಈ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಮುಂಬೈ ಗೆದ್ದರೆ ಆರ್ ಸಿಬಿ ಪ್ಲೇ-ಆಫ್ ಕನಸಿಗೆ ರೆಕ್ಕೆ ಬರುತ್ತದೆ.

ಟೂರ್ನಿಯಲ್ಲಿ ಮುಂಬೈ ತಂಡ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 5 ಪಂದ್ಯದಲ್ಲಿ ಸೋತು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನೂ ಲಕ್ನೋ ತಂಡ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು, 5ರಲ್ಲಿ ಸೋಲು, ಒಂದು ಪಂದ್ಯ ಟೈ ಆಗಿದ್ದು 13 ಅಂಕದೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ. ಪ್ಲೇ-ಆಫ್ ಗೆ ಹತ್ತಿರದಲ್ಲೇ ಇರುವುದರಿಂದ ಎರಡೂ ತಂಡಗಳಿಗೂ ಇಂದಿನ ಗೆಲುವು ಮಹತ್ವದ್ದಾಗಿದೆ.

ಮುಂಬೈ ಗೆಲುವಿಗೆ RCB ಫ್ಯಾನ್ಸ್ ಪ್ರಾರ್ಥನೆ

ಮುಂಬೈ ಇಂದಿನ ಪಂದ್ಯ ಗೆದ್ದರೆ ಆರ್​ಸಿಬಿಗೆ ಲಾಭವೇ ಹೆಚ್ಚು. ಏಕೆಂದರೆ, ಮುಂಬೈ ವಿರುದ್ಧ ಲಕ್ನೋ ಸೋತು, ಮುಂದಿನ ಪಂದ್ಯವನ್ನು ಗೆದ್ದರೂ ಒಟ್ಟು 15 ಅಂಕ ಮಾತ್ರ ಪಡೆಯಲಿದೆ. ಆರ್​ಸಿಬಿ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕಗಳೊಂದಿಗೆ ಲಕ್ನೋ ತಂಡವನ್ನು ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಲು ಅವಕಾಶ ಲಭಿಸಲಿದೆ. ಹೀಗಾಗಿ, ಆರ್​ಸಿಬಿ ಫ್ಯಾನ್ಸ್ ಮುಂಬೈ ಗೆಲ್ಲಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ

ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್

ಲಕ್ನೋ ಸೂಪರ್ ಜೈಂಟ್ಸ್ ತಂಡ

ಕೃನಾಲ್ ಪಾಂಡ್ಯ(ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್

RELATED ARTICLES

Related Articles

TRENDING ARTICLES