ಹಾಸನ: ಮಹಿಳೆಯ ಕಷ್ಟಕ್ಕೆ ಇನ್ನೂಬ್ಬ ಮಹಿಳೆ ಮಾತ್ರ ಸಹಾಯ ಮಾಡುತ್ತಾಳೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೌದು, ಮಹಿಳಾ ಕಂಡಕ್ಟರೊಬ್ಬರು (Conductor) ಬಸ್‌ನಲ್ಲಿಯೇ ಗರ್ಭಿಣಿಗೆ (Pregnant) ಹೆರಿಗೆ ಮಾಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಯೇ ಹೆರಿಗೆ
ಚಿಕ್ಕಮಗಳೂರು ಡಿಪೋದ ಕೆಎ 18 ಎಫ್ 0865 ಕೆಎಸ್‌ಆರ್‌ಟಿಸಿ ಬಸ್ (KSRTC Bus) ಬೆಂಗಳೂರಿನಿಂದ (Bengaluru) ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಬಸ್‌ನಲ್ಲಿ (BUS) ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಮಧ್ಯಾಹ್ನ 1.25ರ ಸುಮಾರಿಗೆ ಹಾಸನದ ಉದಯಪುರ ಕೃಷಿ ಕಾಲೇಜು ಬಳಿ ಹೆರಿಗೆ ನೋವು ಕಾಣಿಸಿಕೊಂಡಿದ್ದು,ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ, ಮಹಿಳಾ ಕಂಡಕ್ಟರ್ ಎಸ್ ವಸಂತಮ್ಮ ಬಸ್ ನಿಲ್ಲಿಸಿ, ಎಲ್ಲಾ 45 ಪ್ರಯಾಣಿಕರನ್ನು ಕೆಳಗಿಳಿಸಿದರು. ನಂತರ ಗರ್ಭಿಣಿಗೆ ಹೆರಿಗೆ ಮಾಡಿಸಿದರು.
ಮಹಿಳೆಯನ್ನು ಶಾಂತಗ್ರಾಮ ಆಸ್ಪತ್ರೆಗೆ ರವಾನೆ
ಮಹಿಳೆಯನ್ನು ಶಾಂತಗ್ರಾಮ ಆಸ್ಪತ್ರೆಗೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಈಗ ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ. ನಂತರ, ಬಸ್ ಸಿಬ್ಬಂದಿಗೆ ಮಹಿಳೆಯು ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆಂದು ತಿಳಿದಿದ್ದು, ಪ್ರಯಾಣಿಕರಿಂದ 1,500 ರೂ. ಗ್ರಹಿಸಿ ಮಹಿಳೆಗೆ ನೀಡಿದ್ದಾರೆ. ಎಸ್ ವಸಂತಮ್ಮ ಅವರ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿಯವರು ಶ್ಲಾಘಿಸಿದ್ದಾರೆ.