Sunday, December 22, 2024

ಕಾಂಗ್ರೆಸ್​ನ 5 ಗ್ಯಾರಂಟಿಗಳಿಗೆ ಕಂಡೀಷನ್ಸ್​​ ಅಪ್ಲೈ : ಜಿ ಪರಮೇಶ್ವರ್​

ಬೆಂಗಳೂರು: ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯ ಗ್ಯಾರಂಟಿಗಳನ್ನು (5 Guarantee) ಅಧಿಕಾರ ರಚನೆಯಾದ ಮೊದಲ ಕ್ಯಾಬಿನೆಟ್​ನಲ್ಲಿ (Cabinet) ಈಡೇರಿಸುವ ಭರವಸೆ ನೀಡಿದ್ರು ಆದರೆ ಅದಕ್ಕೆ ಈಗ ಕಂಡೀಷನ್ಸ್ ಅಪ್ಲೈ ಎಂದು ಜಿ. ಪರಮೇಶ್ವರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗ್ಯಾರಂಟಿಗಳಿಗೆ ಕಂಡೀಷನ್ಸ್​​ ಅಪ್ಲೈ ಎಂದು ಹೇಳಿದ್ದಾರೆ.

ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ

ನಾವು ನೀಡಿದ ಭರವಸೆಗಳಿಗೆ ಬದ್ಧರಾಗಿರುತ್ತೇವೆ. ಅಂದ್ರೆ ಗ್ಯಾರಂಟಿಗಳನ್ನು ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡುತ್ತೇವೆ. ಆಯಾ ಇಲಾಖೆ ಸಚಿವರು ಕೂತು ಇದರ ಬಗ್ಗೆ ವರ್ಕ್ ಮಾಡಿ ಜಾರಿ ಮಾಡುತ್ತಾರೆ. ಕಾಂಗ್ರೆಸ್​​​ನ (Congress) ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತವೆ. ಹಾಗೆ ಸುಮ್ಮನೆ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಹೀಗಾಗಿ ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ.

 

 

RELATED ARTICLES

Related Articles

TRENDING ARTICLES