Monday, December 23, 2024

ಕನ್ಫರ್ಮ್ : ನಾಳೆ ಬೆಂಗಳೂರಿನಲ್ಲೇ ‘ರಾಜ್ಯದ ಮುಂದಿನ ಸಿಎಂ’ ಘೋಷಣೆ

ಬೆಂಗಳೂರು : ಕರುನಾಡ ದೊರೆ ಯಾರು? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಬಹುತೇಕ ಉತ್ತರ ಫಿಕ್ಸ್ ಆಗಿದೆ. ನಾಳೆ ಮುಖ್ಯಮಂತ್ರಿ ಯಾರೆಂಬ ಬಗ್ಗೆ ಘೋಷಣೆಯಾಗಲಿದೆ.

ಹೌದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ(ಮೇ17) ಬೆಂಗಳೂರಿನಲ್ಲಿ ಕರ್ನಾಟಕದ ಮುಂದಿನ ಸಿಎಂ ಘೋಷಣೆ ಸಾಧ್ಯತೆ ಇದೆ ಎಂದು ಎಐಸಿಸಿ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇವತ್ತಲ್ಲ, ನಾಳೆ ಫೈನಲ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಜೊತೆ ಇಂದು ದೆಹಲಿಯಲ್ಲಿ ಚರ್ಚಿಸಿದ್ದು, ಇಬ್ಬರೂ ಕೂಡ ಸಿಎಂ ಗದ್ದುಗೆಗಾಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಖರ್ಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಹಗ್ಗಜಗ್ಗಾಟ ಕಂಟಿನ್ಯೂ

ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಹಗ್ಗಜಗ್ಗಾಟ ಇನ್ನೂ ಕೂಡ ನಿಲ್ಲುವ ಲಕ್ಷಣ ಕಾಣದೆ, ನಾಳೆ ಫೈನಲ್ ಆಗುವ ಸಾಧ್ಯತೆ ಇದೆ. ನಾಳೆ ಸಿಎಂ ಯಾರಾಗಲಿದ್ದಾರೆ ಎಂಬುದು ಫೈನಲ್ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೇಣುಗೋಪಾಲ್ ಮನೆಗೆ ಸಿದ್ದು

ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತುಕತೆ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಸಿವಿ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈ ವೇಳೆ ಶಾಸಕ ಬಿ.ಝಡ್ ಜಮೀರ್ ಅಹಮ್ಮದ್, ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಪುತ್ರ ಡಾ.ಯತಿಂದ್ರ​ ಸಿದ್ದುಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ : ಬಪ್ಪರೆ ಗಂಡೇ : ‘ಸಿದ್ದು ಸಿಎಂ ಆಗದಿದ್ರೆ ಮೀಸಿ ಬೋಳಿಸ್ತಿನಿ’

ಡಿಕೆಶಿ ಡಿಮ್ಯಾಂಡ್​ಗಳೇನು?

  1. ನನಗೆ ಸಿಎಂ ಸ್ಥಾನ ಕೊಡಬೇಕು
  2. ಡಿಸಿಎಂ ಸೇರಿದಂತೆ ಯಾವುದೇ ಸ್ಥಾನ ಬೇಡ
  3. ಅಧಿಕಾರ ಹಂಚಿಕೆ ಸೂತ್ರ ಯಾವುದೇ ಕಾರಣಕ್ಕೂ ಒಪ್ಪಲ್ಲ
  4. ಪಕ್ಷಕ್ಕಾಗಿ ಕಷ್ಟ ಪಟ್ಟಿದ್ದೇನೆ, ಪ್ರತಿಫಲ ಸಿಗಲೇಬೇಕು
  5. 50:50 ಸೂತ್ರ ಅನಿವಾರ್ಯವಾದ್ರೆ, ಮೊದಲು ನನ್ನನ್ನೇ ಸಿಎಂ ಮಾಡಬೇಕು

ಸಿದ್ದು ಬೇಡಿಕೆಗಳೇನು?

  1. ಸಿಎಂ ಆಯ್ಕೆ ವಿಚಾರದಲ್ಲಿ ಕೂಡಲೇ ನಿರ್ಧಾರ ತೆಗೆದುಕೊಳ್ಳಿ
  2. 5 ವರ್ಷ ನನ್ನನ್ನೇ ಸಿಎಂ ಮಾಡಬೇಕು
  3. ಕೇವಲ ಒಂದು ಡಿಸಿಎಂ ಸ್ಥಾನ ಮಾತ್ರ ಇರಲಿ
  4. ಅಧಿಕಾರ ಹಂಚಿಕೆ ಬೇಡವೇ ಬೇಡ
  5. ಆಪ್ತರಿಗೆ ಪ್ರಮುಖ ಖಾತೆಗಳನ್ನ ನೀಡಬೇಕು

RELATED ARTICLES

Related Articles

TRENDING ARTICLES