ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕಣ್ಣೀರನಲ್ಲಿ ಬಿಜೆಪಿ ಈ ಬಾರಿ ಕೊಚ್ಚಿ ಹೋಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಮಾರ್ಮಿಕವಾಗಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಹಿಂದೆ ಯಡಿಯೂರಪ್ಪ ಕಣ್ಣೀರನಲ್ಲಿ ಬಿಜೆಪಿ ಸರ್ಕಾರಕೊಚ್ಚಿ ಹೋಗತ್ತೆ ಎಂದಿದ್ದೆ. ಇವತ್ತು ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದ್ರೆ ತಿನ್ನಬಾರದ ಪೆಟ್ಟು ತಿಂತಾರೆ. ನಾನು ಅವತ್ತು ಒಬ್ಬ ವ್ಯಕ್ತಿ ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೆ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಯಡಿಯೂರಪ್ಪ ಅವರನ್ನು ಮುಂದುವರೆಸಿಬೇಕು ಎಂದಿದ್ರು. ಯಾವದೋ ಕೆಟ್ಟ ಉದ್ದೇಶ ಅಥವಾ ಸ್ವಾರ್ಥಕ್ಕೆ ತಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಸ್ಥಿಗೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಡಿ.ಕೆ ಶಿವಕುಮಾರ್
ಖಾವಿಧಾರಿಗಳನ್ನು ಸರಿಯಾಗಿ ನಡೆಸುಕೊಳ್ಳಲಿಲ್ಲ
ಯಡಿಯೂರಪ್ಪ ಬದಾಲಿಯಸದ್ದೇ ಈ ಪರಸ್ಥಿತಿಗೆ ಕಾರಣ. ನಾನು ಹಿಂದೆ ಪರ್ಸೆಂಟೇಜ್ ಬಗ್ಗೆ ದುರಹಂಕಾರಿಯಾಗಿ ಮಾತಾಡಿದ್ರು. ಗುಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ರು. ಅದರ ಪರಿಣಾಮವೇ ಇದಾಗುತ್ತೆ. ಸ್ವಾಮೀಜಿ ಗಂಭಿರ ಹೇಳಿಕೆ ಮಾಡಿದಾಗ, ಚಿಂತನ ಮಂಥನ ಮಾಡಬೇಕು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನು ಸರಿಯಾಗಿ ನಡೆಸುಕೊಳ್ಳಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿ.ಎಲ್ ಸಂತೋಷ್ ವಿರುದ್ದ ಸ್ವಾಮೀಜಿ ಗರಂ
ಖಾವಿ ದಾರಿಗಳು ಪಾಠ ಮಾಡಿದ್ರು, ಅವರು ಪಾಠ ಕಲಿಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ ಇಂದಿನ ಸ್ಥಿತಿಗೆ ಕಾರಣ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ ಕಡೆಗಣಸಿರೋದೆ ಇದಕ್ಕೆಲ್ಲ ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತ ಕೇಳಬೇಕು ಅಂದ್ರೆ ಏನು? ಎಂದು ಪರೋಕ್ಷವಾಗಿ ಬಿ.ಎಲ್ ಸಂತೋಷ್ ವಿರುದ್ದ ಸ್ವಾಮೀಜಿ ಗರಂ ಆಗಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಹೇಗೆ ಮಾಡಿದ್ರು. ಯಡಿಯೂರಪ್ಪ ಕೆಳಗಿಳಿಸೋವಾಗ ಹೇಗೆ ನಡೆಕೊಂಡರು ರಾಜ್ಯಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ.