ಬೆಂಗಳೂರು: ಸಿಎಂ ಆಯ್ಕೆ ಪಟ್ಟ ದೆಹಲಿ ಅಂಗಳ ತಲುಪಿದೆ. ಹೀಗಾಗಿ ಮಾಜಿ ಸಿದ್ದರಾಮಯ್ಯ 1 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ್ದಾರೆ.
ಹೌದು, ಎಐಸಿಸಿ ಅಧ್ಯಕ್ಷ ಖರ್ಗೆ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಜೊತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದೆ(Karnataka Assembly Elections 2023). ಹೊಸ ಸರ್ಕಾರ ರಚನೆಗಾಗಿ ಭಾರೀ ಕಸರತ್ತುಗಳು ನಡೆಯುತ್ತಿವೆ. ಆದ್ರೆ ಯಾರಾಗ್ತಾರೆ ಸಿಎಂ ಎಂಬುವುದು ಈಗ ಕರುನಾಡಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ (Who is Next CM). ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷಸ ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಸಿಎಂ ಯಾರು ಅನ್ನೋದರ ಬಗ್ಗೆ ಚರ್ಚೆಗಳು ನಡೆದಿವೆ. ಶಾಸಕರ ಅಭಿಪ್ರಾಯ ಪಡೆಯಲಿರುವ ಹೈಕಮಾಂಡ್ ಸಿಎಂ ಯಾರು ಅನ್ನೋದನ್ನ ಘೋಷಣೆ ಮಾಡಲಿದೆ. ಹೀಗಾಗಿ ಇಂದು ಕಾಂಗ್ರೆಸ್ ನಾಯಕರು ದೆಹಲಿಯತ್ತ ಹಾರಲಿದ್ದಾರೆ.
ಸಿದ್ದರಾಮಯ್ಯ ಜೊತೆಗೆ ಜಮೀರ್ ಅಹ್ಮದ್ ಖಾನ್ ಕೂಡ ದೆಹಲಿಗೆ ಪ್ರಯಾಣ
ಸಿದ್ದರಾಮಯ್ಯ ಜೊತೆಗೆ ಜಮೀರ್ ಅಹ್ಮದ್ ಖಾನ್ ಕೂಡ ದೆಹಲಿಗೆ ತೆರಳಲಿದ್ದಾರೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಹೆಚ್ಚಿನ ಮೊರೆ ಹೋಗುವ ಸಾಧ್ಯತೆ ಇದೆ. ನಿನ್ನೆ ಲಿಖಿತ ರೂಪದಲ್ಲಿ ಬಹುತೇಕರಿಂದ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ನಮೂದು ಮಾಡಲಾಗಿತ್ತು. ಶೇ.40 ಕ್ಕಿಂತ ಹೆಚ್ಚು ಮಂದಿ ಶಾಸಕರಿಂದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ನಮೂದು ಮಾಡಲಾಗಿದೆ. ಹೀಗಾಗಿ ಸಿಎಂ ಸ್ಥಾನಕ್ಕಾಗಿ ವಿಶೇಷ ವಿಮಾನದ ಮೂಲಕ ಸಿದ್ದರಾಮಯ್ಯ ದೆಹಲಿಗೆ ಹಾರಲಿದ್ದಾರೆ.