Sunday, December 22, 2024

ಕರುನಾಡಿಗೆ ಯಾರಾಗ್ತಾರೆ ನೂತನ ಸಿಎಂ..?

ಬೆಂಗಳೂರು : ರಾಜ್ಯವಿಧಾನಸಭಾ ಚುನಾವಣೆ ಫಲಿತಾಂಶ ಈಗಗಲೇ ಹೊರಬಿದ್ದು ರಾಜ್ಯದ ಜನರಿಗೆ ನಮ್ಮ ಮುಂದಿನ ಸಿಎಂ ಯಾರಾಗ್ತಾರೆ ಎಂದು  ಕುತೂಹಲ ಮೂಡುತ್ತದೆ.

ಹೌದು ನಿನ್ನೇಯಷ್ಟೇ  ಚುನಾವಣಾ ಫಲಿತಾಂಶ ರಿಲೀಸ್​ ಆಗಿದ್ದು, ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಇನ್ನೂ ಸೋಲುಂಡ ಬಿಜೆಪಿ ಪಕ್ಷ ಅಧಿಕಾರ ಸಿಗದೆ ನಿರಾಸೆಯಾಗಿದ್ದಾರೆ .

ಈ ಬಾರಿ ಅತಿಹೆಚ್ಚು ಬಹುಮತ ಪಡೆದ ಕಾಂಗ್ರೆಸ್​ ಪಕ್ಷದಲ್ಲಿ ಈಗ ಮುಂದಿನ ಸಿಎಂ ಬಗ್ಗೆ ಚರ್ಚೆಗಳು ನಡಿಯುತ್ತಿದ್ದು, ಸಿಎಂ ರೇಸ್​ನಲ್ಲಿ  ಡಿಕೆ ಶಿಮಾಕುಮಾರ್​, ಸಿದ್ದರಾಮಯ್ಯ, ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ,ಕೆ.ಜೆ. ಜಾರ್ಜ್​ , ರಾಮಲಿಂಗಾರೆಡ್ಡಿ, ಕೃಷ್ಣಪ್ಪ,ಕೃಷ್ಣಬೈರೇಗೌಡ,ಸತೀಶ್ ಜಾರಕಿಹೊಳಿ,ಎಚ್. ಕೆ. ಪಾಟೀಲ್, ಈಶ್ವರ್​ ಖಂಡ್ರೆ, ಶಿವಲಿಂಗೇಗೌಡ,
ಎಂ.ಬಿ. ಪಾಟೀಲ್, ಎನ್. ರಾಜಣ್ಣ ಬಿಜೆಪಿ ತೊರೆದು ಬಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ,
ಮಂಡ್ಯದಿಂದ ಚೆಲುವರಾಯಸ್ವಾಮಿ, ಶಿವರಾಜ್ ತಂಗಡಗಿ ಬಸವರಾಜ ರಾಯರೆಡ್ಡಿ,TB ಜಯಚಂದ್ರ, ಸಂತೋಷ್ ಲಾಡ್, ಡಾ.ಎಚ್. ಸಿ. ಮಹದೇವಪ್ಪ, ಯು.ಟಿ. ಖಾದರ್ ಕೆ.ಎಚ್. ಮುನಿಯಪ್ಪ, ಜಮೀರ್ ಅಹಮ್ಮದ್ ಸೇರಿದಂತೆ ಹಲವರು ಇದ್ದಾರೆ.

ಇದನ್ನೂ ಓದಿ :136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ : ಯಾವ ಜಿಲ್ಲೆಯಲ್ಲಿ ಯಾರಿಗೆ ಬಲ..?

ಇಂದು ಕಾಂಗ್ರೆಸ್​ ಖಾಸಗಿ ಹೋಟೆಲ್​ನಲ್ಲಿ CLP ಮಹತ್ವದ ಮೀಟಿಂಗ್ ಸಭೆ ನಡಿಸಲಿದ್ದು, ಹೈಕಮಾಂಡ್​ ಇಂದು ನೂತನ ಕಾಂಗ್ರೆಸ್ ಶಾಸಕರಿಂದ ಸಿಎಂ ಆಯ್ಕೆ ಕ್ಯಾಬಿನೆಟ್ ರಚನೆ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.

 

 

 

RELATED ARTICLES

Related Articles

TRENDING ARTICLES