Monday, December 23, 2024

ಕುಮಾರಸ್ವಾಮಿಗೆ ‘ಗುಬ್ಬಿ ಶಾಸಕ ಶ್ರೀನಿವಾಸ್ ಬಹಿರಂಗ ಸವಾಲ್’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿದೆ. ಜೆಡಿಎಸ್ ಸಾಧನೆ ಬಗ್ಗೆ ಮಾಜಿ ಸಚಿವ ಹಾಗೂ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್  ಲೇವಡಿ ಮಾಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದೇ ಇದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಅಂತಾ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ರು. ಈಗ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದೇ ಇದ್ದರೆ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು. ಮಂಡ್ಯ ಪರಿಸ್ಥಿತಿ ನೋಡಿದರೆ, ಜನರ ತೀರ್ಮಾನ ಗೊತ್ತಾಗುತ್ತದೆ. ಬರೀ ಬ್ಲಾಕ್ ಮೇಲ್ ಮಾಡಿಯೇ ಅವರು ಈ ಸ್ಥಿತಿಗೆ ಬಂದರು ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ‘ಆಪರೇಷನ್ ಕಮಲ’ಕ್ಕೆ ಬಲಿಯಾದರಲ್ಲಿ ಸೋತವರೇ ಹೆಚ್ಚು, ಗೆದ್ದಿದ್ದು ಯಾರು?

ರಾಮನಗರದಲ್ಲಿ‌ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರಿಗೆ ಸೋಲಾಗಿದೆ. ಅಲ್ಲೇ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮತ್ತೇ ನನ್ನ ಸೋಲಿಸಲು ಹೊರಟಿದ್ರು. ರಾಮನಗರದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಸ್.ಆರ್ ಶ್ರೀನಿವಾಸ್ ಛೇಡಿಸಿದ್ದಾರೆ.

ರಾಜ್ಯದ ಜನತೆ ಕುಟುಂಬ ರಾಜಕಾರಣಕ್ಕೆ ಕಲಿಸಿದ ಪಾಠ ಇದು. ಇನ್ನೂ ಇಬ್ಬರನ್ನು ಸೋಲಿಸಿ ಜನರು ಕುಟುಂಬ ರಾಜಕಾರಣಕ್ಕೆ ಪಾಠ ಕಲಿಸಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹಾಗೂ ಎಚ್.ಡಿ ರೇವಣ್ಣ ಅವರ ಸೋಲನ್ನು ಬಯಸಿದ್ದಾರೆ.

RELATED ARTICLES

Related Articles

TRENDING ARTICLES