ಬೆಂಗಳೂರು : ಕಾಂಗ್ರೆಸ್ ಪಕ್ಷ ಕರುನಾಡನ್ನು ‘ಕಬ್ಜ’ ಮಾಡಿದ್ದಾಯ್ತು. ಈಗ ಏನಿದ್ದರೂ ಕರುನಾಡ ದೊರೆಯ ಆಯ್ಕೆ ಒಂದೇ ಬಾಕಿ. ಸಿಎಂ ಪಟ್ಟಕ್ಕಾಗಿ ಕೈ ಪಾಳಯದಲ್ಲಿ ಭಾರೀ ಫೈಟ್ ಏರ್ಪಟ್ಟಿದೆ. ಈ ಕುತೂಹಲಕ್ಕೆ ಇಂದು ಸಂಜೆಯೇ ಕೈ ಹೈಕಮಾಂಡ್ ತೆರೆ ಎಳೆಯಲಿದೆ.
ಹೌದು, ಕಾಂಗ್ರೆಸ್ನಲ್ಲಿ ಯಾರಾಗ್ತಾರೆ ಸಿಎಂ? ಎಂಬ ಕುತೂಹಲ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಿಕೆಶಿ ಮನೆ ಮುಂದೆ ಹಾಕಿರುವ ”ಮುಂದಿನ ಸಿಎಂ ಡಿಕೆಶಿಗೆ ಶುಭವಾಗಲಿ” ಎಂಬ ಫ್ಲೆಕ್ಸ್ ಚರ್ಚೆಗಳಿಗೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ ಐದು ವರ್ಷ ಮುಖ್ಯಮಂತ್ರಿ ಆಗಿದ್ದು, ಅವರು ಡಿಕೆ ಶಿವಕುಮಾರ್ ಅವರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕು, ಬಿಜೆಪಿ ಸರಕಾರದಿಂದ ಇಡಿ, ಐಟಿಯ ಸಂಕಷ್ಟ ಅನುಭವಿಸಿಯೂ ಡಿಕೆಶಿ ಅವರು ಎದ್ದು ಬಂದಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯ ನಿಜವಾಗುತ್ತಾ..?
ಹುಟ್ಟಿದ ದಿನವೇ ಡಿಕೆಶಿವಕುಮಾರ್ ಸಿಎಂ ಪಟ್ಟ ಏರುತ್ತರೆ ಎಂದು ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದರು. ಇಂದು ನಿಜಾವಾಗುತ್ತಾ ಎಂದು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಹೈಕಮಾಂಡ್ ಒಗ್ಗಟ್ಟಿನ ಮಂತ್ರ ಪಠಿಸಿದೆ.