Sunday, January 19, 2025

ಬೊಮ್ಮಾಯಿ ತವರು ಜಿಲ್ಲೆಯಲ್ಲೇ ‘ಬಿಜೆಪಿ ಪುಡಿ.. ಪುಡಿ..’ : 5 ಕ್ಷೇತ್ರದಲ್ಲಿ ‘ಕೈ’ಗೆ ಗೆಲುವು

ಹಾವೇರಿ : ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಕಾಂಗ್ರೆಸ್ ಸುಂಟರಗಾಳಿಗೆ ಕಮಲ ಛಿದ್ರ ಛಿದ್ರವಾಗಿದೆ.

ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಯಾವೊಬ್ಬ ಬಿಜೆಪಿ ಅಭ್ಯರ್ಥಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ಗೆಲುವು ಸಾಧಿಸಿಲ್ಲ.

ಹಾವೇರಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ, ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದ ಶಿಗ್ಗಾವಿ ಹೊರತುಪಡಿಸಿ ಉಳಿದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಕಂಡಿದೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್-ಯು.ಬಿ ಬಣಕಾರ-85378

ಬಿಜೆಪಿ-ಬಿಸಿ ಪಾಟೀಲ್-70358

ಗೆಲುವಿನ ಅಂತರ-15020

ರಾಣೇಬೆನ್ನೂರ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್-ಪ್ರಕಾಶ ಕೋಳಿವಾಡ-71830

ಬಿಜೆಪಿ-ಅರುಣಕುಮಾರ ಪೂಜಾರ-62030

ಎನ್ ಸಿಪಿ-ಆರ್.ಶಂಕರ್-37559

ಗೆಲುವಿನ ಅಂತರ-9800

ಇದನ್ನೂ ಓದಿ : ಮೈಸೂರು ಜಿಲ್ಲೆಯಲ್ಲಿ ಗೆದ್ದವರು ಯಾರು? ಯಾರಿಗೆ ಎಷ್ಟು ಬಲ?

ಬ್ಯಾಡಗಿ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್-ಬಸವರಾಜ ಶಿವಣ್ಣನವರ-97740

ಬಿಜೆಪಿ-ವಿರೂಪಾಕ್ಷಪ್ಪ ಬಳ್ಳಾರಿ-73899

ಗೆಲುವಿನ ಅಂತರ-23841

ಹಾನಗಲ್ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್-ಶ್ರೀನಿವಾಸ ಮಾನೆ-94590

ಬಿಜೆಪಿ-ಶಿವರಾಜ ಸಜ್ಜನ-72645

ಗೆಲುವಿನ ಅಂತರ-21945

ಹಾವೇರಿ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್-ರುದ್ರಪ್ಪ ಲಮಾಣಿ-93827

ಬಿಜೆಪಿ-ಗವಿಸಿದ್ದಪ್ಪ-81912

ಗೆಲುವಿನ ಅಂತರ-11915

ಶಿಗ್ಗಾಂವಿ ವಿಧಾಸಭಾ ಕ್ಷೇತ್ರ

ಬಿಜೆಪಿ-ಬಸವರಾಜ ಎಸ್.ಬೊಮ್ಮಾಯಿ‌-100016

ಕಾಂಗ್ರೆಸ್-ಯಾಸೀನ್ ಖಾನ್ ಪಠಾಣ್-64038

ಗೆಲುವಿನ ಅಂತರ-35978

RELATED ARTICLES

Related Articles

TRENDING ARTICLES