Saturday, May 18, 2024

ಮತ ಎಣಿಕೆ ಆರಂಭ : 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ, ಈ ಕ್ಷೇತ್ರಗಳ ಮೇಲೆ ರಾಜ್ಯದ ಕಣ್ಣು

ಬೆಂಗಳೂರು : ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬಿಳಲಿದೆ. 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯದ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. 2,430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು, ಓರ್ವ ಇತರೆ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 24, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 21 ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸಂಜೆ ಬಳಿಕ ಪೂರ್ಣ ಫಲಿತಾಂಶ

ಇನ್ನೂ ರಾಜ್ಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲೇ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮಧ್ಯಾಹ್ನದ ವೇಳೆಗೆ ಬಹುತೇಕ ಕ್ಷೇತ್ರಗಳ ಚಿತ್ರಣ ಬಯಲಾಗಲಿದೆ. ಸಂಜೆ ಬಳಿಕ ಪೂರ್ಣ ಫಲಿತಾಂಶ ಸಿಗಲಿದೆ.

ಇದನ್ನೂ ಓದಿ : ‘ರಾಜ್ಯದಲ್ಲಿ ಕಮಲ’ ಅರಳಿಸಲು ಕೇಸರಿ ಕಲಿಗಳ ರಣತಂತ್ರ

ಪಕ್ಷೇತರರಿಗೆ ಗಾಳ ಹಾಕಲು ಸ್ಕೆಚ್

ಇನ್ನೂ ಪಕ್ಷೇತರವಾಗಿ ಗೆಲ್ಲುವ ಸಾಧ್ಯತೆ ಇದ್ದವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಗಾಳ ಹಾಕಲು ಸ್ಕೆಚ್​ ಹಾಕಿದ್ದಾರೆ. ಬಿಜೆಪಿ ಗೆಲ್ಲಬಹುದಾ ಸಂಭಾವ್ಯ ಪಕ್ಷೇತರ ಶಾಸಕರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಸ್ಥಳಿಯ ನಾಯಕರಿಗೂ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ಷೇತ್ರಗಳ ಮೇಲೆ ರಾಜ್ಯದ ಕಣ್ಣು

ವರುಣಾ : ಸಿದ್ದರಾಮಯ್ಯ (ಕಾಂಗ್ರೆಸ್) vs ವಿ.ಸೋಮಣ್ಣ(ಬಿಜೆಪಿ)

ಕನಕಪುರ : ಡಿ.ಕೆ ಶಿವಕುಮಾರ್(ಕಾಂಗ್ರೆಸ್) vs ಆರ್. ಅಶೋಕ್(ಬಿಜೆಪಿ)

ಶಿಗ್ಗಾಂವಿ : ಬಸವರಾಜ ಬೊಮ್ಮಾಯಿ(ಬಿಜೆಪಿ)

ಹುಬ್ಬಳ್ಳಿ-ಧಾರವಾಡ : ಜಗದೀಶ್ ಶೆಟ್ಟರ್(ಕಾಂಗ್ರೆಸ್) v s ಮಹೇಶ್ ಟೆಂಗಿನಕಾಯಿ(ಬಿಜೆಪಿ)

ಚನ್ನಪಟ್ಟಣ : ಎಚ್.ಡಿ ಕುಮಾರಸ್ವಾಮಿ(ಜೆಡಿಎಸ್) vs ಸಿ.ಪಿ ಯೋಗೇಶ್ವರ್(ಬಿಜೆಪಿ)

ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧ

ವಿಧಾನಸಭೆ ಚುನಾವಣಾ ಫಲಿತಾಂಶ ಹಿನ್ನೆಲೆ ಬೆಂಗಳೂರಿನ ಮತ ಎಣಿಕೆ ಕೇಂದ್ರಗಳ ಸುತ್ತ ಇಂದು ಬೆಳಗ್ಗೆ 6ರಿಂದ ಮತ ಎಣಿಕೆ ಅಂತ್ಯದವರೆಗೂ ಸಂಚಾರ ನಿಷೇಧ ಮಾಡಲಾಗಿದೆ.

RELATED ARTICLES

Related Articles

TRENDING ARTICLES