Wednesday, January 22, 2025

ಗೆಲುವಿನ ಖಾತೆ ತೆರೆದ ಕಾಂಗ್ರೆಸ್, ಜಮೀರ್ ಅಹ್ಮದ್ ಭರ್ಜರಿ ಜಯಭೇರಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಕಾಂಗ್ರೆಸ್ ಪಕ್ಷ ಗೆಲುವಿನ ಖಾತೆ ತೆರೆದಿದೆ.

ಜಮೀರ್ ಅಹ್ಮದ್​ಗೆ ಜಯ

ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ​ ಜಮೀರ್ ಅಹ್ಮದ್​ ಭರ್ಜರಿ ಜಯಭೇರಿ ಭಾರಿಸಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಟಿ.ರಘುಮೂರ್ತಿ,  ಕೂಡ್ಲಗಿ ವಿಧಾಸಭಾ ಕ್ಷೇತ್ರದಲ್ಲಿಎನ್.ಟಿ.ಶ್ರೀನಿವಾಸ್ ಜಯಭೇರಿ ಭಾರಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ರಿಜ್ವಾನ್ ಅರ್ಷದ್​ ಗೆಲವು ಸಾಧಿಸಿದ್ದಾರೆ.

ಸೋಮಣ್ಣಗೆ ಸೋಲು, ಸಿ.ಪುಟ್ಟರಂಗಶೆಟ್ಟಿಗೆ ಗೆಲವು

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣಗೆ ಸೋತಿದ್ದಾರೆ. ಕಾಂಗ್ರೆಸ್​ನ ಸಿ.ಪುಟ್ಟರಂಗಶೆಟ್ಟಿಗೆ ಗೆದ್ದಿದ್ದಾರೆ.

ಬಿಜೆಪಿ 75, ಕಾಂಗ್ರೆಸ್​ 118 ಮುನ್ನಡೆ

224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ 118, ಬಿಜೆಪಿ 75, ಜೆಡಿಎಸ್​ 24, ಕೆಆರ್​​ಪಿಪಿ 1, ಎನ್​ಸಿಪಿ 1, ಎಸ್​ಕೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

RELATED ARTICLES

Related Articles

TRENDING ARTICLES