Wednesday, January 22, 2025

ಕರುನಾಡಲ್ಲಿ ‘ಕೈ’ ಕಿಲಕಿಲ : ಕಾಂಗ್ರೆಸ್ 107, ಬಿಜೆಪಿ 81, ಜೆಡಿಎಸ್ 21ರಲ್ಲಿ ಮುನ್ನಡೆ

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು 107 ಕ್ಷೇತ್ರಗಳಲ್ಲಿ ಕಾಂಗ್ರೆಸ್​, 81 ಕ್ಷೇತ್ರಗಳಲ್ಲಿ ಬಿಜೆಪಿ, 21 ಕ್ಷೇತ್ರಗಳಲ್ಲಿ ಜೆಡಿಎಸ್​ ಮತ್ತು 2 ಕ್ಷೇತ್ರಗಳಲ್ಲಿ ಇತರೆ ಮುನ್ನಡೆ ಸಾಧಿಸಿದ್ದಾರೆ.

ಕನಕಪುರದಲ್ಲಿ ಡಿಕೆಶಿ ಮುನ್ನಡೆ

ರಾಮನಗರ ಜಿಲ್ಲೆ ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಹಿನ್ನೆಡೆ ಸಾಧಿಸಿದ್ದು, 9 ಸಾವಿರ ಮತಗಳ ಅಂತರಿಂದ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ ಶಿವಕುಮಾರ್​ ಅವರು ಮುನ್ನಡೆಯಲ್ಲಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಫರ್ಧಿಸಿದ್ದ ಸಚಿವ ವಿ. ಸೋಮಣ್ಣ ಹಿನ್ನಡೆ ಅನುಭವಿಸಿದ್ದಾರೆ. ಮತ್ತೊಂದೆಡೆ, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಅವರಿಗೆ 4 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆ ಹಿನ್ನಡೆಯಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ​ ಶೆಟ್ಟರ್​ ಹಿನ್ನಡೆ ಅನುಭವಿಸಿದ್ದಾರೆ. ಮತ್ತೊಂದೆಡೆ, ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಶಾಂತಿನಗರದಲ್ಲಿ ಬದಲಾವಣೆ ಗಾಳಿ?

ಹಾಲಿ ಶಾಸಕ ಹ್ಯಾರಿಸ್​ಗೆ ತೀವ್ರ ಹಿನ್ನಡೆ

5ನೇ ಸುತ್ತಿನಲ್ಲೂ ಹ್ಯಾರಿಸ್​ ಹಿನ್ನಡೆ

ಬಿಜೆಪಿ ಅಭ್ಯರ್ಥಿ 1,192 ಮತಗಳಿಂದ ಮುನ್ನಡೆ

ಬಿಜೆಪಿಯ ಶಿವಕುಮಾರ್​ಗೆ ಮುನ್ನಡೆ

ಬ್ಯಾಟರಾಯನಪುರದಲ್ಲಿ ಕೃಷ್ಣಬೈರೇಗೌಡ ಮುನ್ನಡೆ

ಕೃಷ್ಣಬೈರೇಗೌಡ 3,752 ಮತಗಳಿಂದ ಮುನ್ನಡೆ

ಜಯನಗರದಲ್ಲಿ ಸೌಮ್ಯ ರೆಡ್ಡಿಗೆ ಹಿನ್ನಡೆ

ಬಿಜೆಪಿ ಅಭ್ಯರ್ಥಿ 3,797 ಮತಗಳಿಂದ ಮುನ್ನಡೆ

 

RELATED ARTICLES

Related Articles

TRENDING ARTICLES