Sunday, December 22, 2024

136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ : ಯಾವ ಜಿಲ್ಲೆಯಲ್ಲಿ ಯಾರಿಗೆ ಬಲ?

ಬೆಂಗಳೂರು : ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಕುರುನಾಡ ಜನರ ತೀರ್ಫು ಸ್ಪಷ್ಟವಾಗಿದೆ.

ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲ ಸನ್ನದ್ಧವಾಗಿದೆ. ‘ಈ ಬಾರಿಯ ನಿರ್ಧಾರ, ಬಹುಮತದ ಕಾಂಗ್ರೆಸ್ ಸರ್ಕಾರ’ ಎಂದು ಕೈ ಕಲಿಗಳು ಹಿರಿ ಹಿರಿ ಹಿಗ್ಗಿದ್ದಾರೆ.

ಇನ್ನೂ ಆಡಳಿತರೂಢ ಬಿಜೆಪಿ ಪಕ್ಷ 65 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ 19 ಸ್ಥಾನಗಳು, 4 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವಿನ ಸಿಹಿ ಸವಿದಿದ್ದಾರೆ.

ಯಾವ ಜಿಲ್ಲೆಯಲ್ಲಿ ಯಾರಿಗೆ ಬಲ

  1. ಚಿಕ್ಕಬಳ್ಳಾಪುರ : 5 ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಜೆಡಿಎಸ್-1, ಪಕ್ಷೇತರ-1
  2. ಕೋಲಾರ : 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ -4, ಜೆಡಿಎಸ್- 2
  3. ಬೆಂಗಳೂರು ನಗರ : 18 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-13, ಬಿಜೆಪಿ-15
  4. ಬೆಂಗಳೂರು ಗ್ರಾಮಾಂತ : 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಬಿಜೆಪಿ-1
  5. ರಾಮನಗರ : 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಜೆಡಿಎಸ್-1
  6. ಮಂಡ್ಯ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5, ಜೆಡಿಎಸ್-1, ಪಕ್ಷೇತರ-1
  7. ಹಾಸನ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-1, ಜೆಡಿಎಸ್-4, ಬಿಜೆಪಿ-2
  8. ದಕ್ಷಿಣ ಕನ್ನಡ : 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-2, ಬಿಜೆಪಿ-6
  9. ಕೊಡಗು : 2 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-2
  10. ಮೈಸೂರು : 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-8, ಜೆಡಿಎಸ್-2, ಬಿಜೆಪಿ-1
  11. ಚಾಮರಾಜನಗರ : 4 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್-3, ಜೆಡಿಎಸ್-1
  12. ಬೆಳಗಾವಿ : 18 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-11, ಬಿಜೆಪಿ-7
  13. ಬಾಗಲಕೋಟೆ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5, ಬಿಜೆಪಿ-2
  14. ವಿಜಯಪುರ : 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-6, ಜೆಡಿಎಸ್-1, ಬಿಜೆಪಿ-1
  15. ಕಲಬುರಗಿ : 9 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-7, ಬಿಜೆಪಿ-2
  16. ಯಾದಗಿರಿ : 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಜೆಡಿಎಸ್-1
  17. ಬೀದರ್ : 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-2, ಬಿಜೆಪಿ-4
  18. ರಾಯಚೂರು : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-4, ಜೆಡಿಎಸ್-1, ಬಿಜೆಪಿ-2
  19. ಕೊಪ್ಪಳ : 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಬಿಜೆಪಿ-1, ಇತರೆ-1
  20. ಗದಗ : 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-2, ಬಿಜೆಪಿ-2
  21. ಧಾರವಾಡ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-4, ಬಿಜೆಪಿ-3
  22. ಉತ್ತರ ಕನ್ನಡ : 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-4, ಬಿಜೆಪಿ-2
  23. ಹಾವೇರಿ : 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5, ಬಿಜೆಪಿ-1
  24. ವಿಜಯನಗರ : 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-2, ಜೆಡಿಎಸ್-1, ಬಿಜೆಪಿ-1, ಇತರೆ-1
  25. ಬಳ್ಳಾರಿ : 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5
  26. ಚಿತ್ರದುರ್ಗ : 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5, ಬಿಜೆಪಿ-1
  27. ದಾವಣಗೆರೆ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-6, ಬಿಜೆಪಿ-1
  28. ಶಿವಮೊಗ್ಗ : 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ಬಿಜೆಪಿ-3, ಪಕ್ಷೇತರ-1
  29. ಉಡುಪಿ : 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-5
  30. ಚಿಕ್ಕಮಗಳೂರು : 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-5
  31. ತುಮಕೂರು : 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-7, ಜೆಡಿಎಸ್-2, ಬಿಜೆಪಿ-2

RELATED ARTICLES

Related Articles

TRENDING ARTICLES