Sunday, December 22, 2024

ಕಾಂಗ್ರೆಸ್ ಗೆ ಸರಳ ಬಹುಮತ : ರಾಮಭಕ್ತ ‘ಹನುಮ’ನ ಮೊರೆ ಹೋದ ಸಿಎಂ ಬೊಮ್ಮಾಯಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಗ್ಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯದಲ್ಲಿ ಬಿಜೆಪಿ 121ಸ್ಥಾನ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಪ್ತರು ಲೆಕ್ಕ ಹಾಕಿದ್ದಾರೆ.

ಉನ್ನತ ಮೂಲಗಳು ಈ. ವಿಷಯ ತಿಳಿಸಿದ್ದುಬೊಮ್ಮಾಯಿ ಅವರ ಆಪ್ತ ಸಚಿವರೊಬ್ಬರ ಪ್ರಕಾರ, ಕಾಂಗ್ರೆಸ್  ಗಳಿಕೆ120 ಸೀಟುಗಳ ಆಸುಪಾಸಿನಲ್ಲಿರಲಿದೆ.

ಬಿಜೆಪಿಯ ಗಳಿಕೆ 70 ರಿಂದ 75 ಸೀಟುಗಳ ಆಸುಪಾಸಿನಲ್ಲಿದ್ದರೆ, ಜೆಡಿಎಸ್ ಗಳಿಕೆ 30 ಸೀಟುಗಳ ಆಸುಪಾಸಿನಲ್ಲಿದೆ ಎಂಬುದು ಬೊಮ್ಮಾಯಿ ಆಪ್ತ ಸಚಿವರ ಲೆಕ್ಕಾಚಾರ. ಈ ಲೆಕ್ಕಾಚಾರ ಮೀರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಪವಾಡ ಎಂದು ಈ ಸಚಿವರು ಹೇಳಿದ್ದಾರೆ ಎಂಬುದು ಮೂಲಗಳ ಮಾಹಿತಿ.

  • ರಾಮನಗರದಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ​ಗೆ ಮುನ್ನಡೆ
  • ಹಾಸನದಲ್ಲಿ ಬಿಜೆಪಿಯ ಪ್ರೀತಂಗೌಡ ಹಿನ್ನಡೆ, ಜೆಡಿಎಸ್​ನ ಸ್ವರೂಪ್​ಗೆ ಮುನ್ನಡೆ,
  • ಶಿರಹಟ್ಟಿ ಬಿಜೆಪಿಯ ಡಾ.ಚಂದ್ರು ಲಮಾಣಿಗೆ ಮುನ್ನಡೆ
  • ಅರಕಲಗೂಡಿನಲ್ಲಿ ಜೆಡಿಎಸ್​ನ ಎ.ಮಂಜು ಮುನ್ನಡೆ

RELATED ARTICLES

Related Articles

TRENDING ARTICLES