Wednesday, January 22, 2025

‘ನನಗಾಗಿ, ಪಕ್ಷಕ್ಕಾಗಿ, ಶಿಡ್ಲಘಟ್ಟದ ಏಳಿಗೆ’ಗಾಗಿ ದುಡಿದಿದ್ದೀರಿ : ಸೀಕಲ್‌ ರಾಮಚಂದ್ರಗೌಡ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್‌ ರಾಮಚಂದ್ರಗೌಡ ಅವರು ಕಾರ್ಯಕರ್ತರ ಸಭೆ ಕರೆದು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದನೂ ಕೂಡ ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೇ, ನಿದ್ರಾಹಾರಗಳನ್ನು ಬಿಟ್ಟು ನಿರಂತರವಾಗಿ ನನ್ನ ಜೊತೆಗೆ ದುಡಿದಿದ್ದೀರಿ. ನನಗಾಗಿ, ಪಕ್ಷಕ್ಕಾಗಿ, ದೇಶದ ಮತ್ತು ಶಿಡ್ಲಘಟ್ಟದ ಏಳಿಗೆಗಾಗಿ ದುಡಿದಿದ್ದೀರಿ ಎಂದು ಹೇಳಿದರು.

ಧನ್ಯವಾದ ಎಂಬುದು ಸಣ್ಣ ಪದ ಆಗುತ್ತೆ. ಆದರೂ ತಮ್ಮೆಲ್ಲರ ಕಾರ್ಯವೈಖರಿ, ಪಕ್ಷನಿಷ್ಠರಾಗಿ ಕೆಲಸ ಮಾಡಿರುವ ಪರಿ ಖಷಿ ನೀಡಿದೆ. ರಾಜಕಾರಣದಲ್ಲಿ ಗೆಲುವು ಸೋಲು ಇದ್ದದ್ದೇ. ಆದರೆ. ಅದರಾಚನೆ ನನ್ನ ಜೊತೆ ನಿಂತಂತ ನಿಮ್ಮೆಲ್ಲರಿಗೂ ಕೃತಜ್ಞತೆ ಎಂದು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಇದನ್ನೂ ಓದಿ : ಗೌಡ್ರು ರಾಜಕಾರಣಕ್ಕೆ ಬಂದಿರೋದು ದುಡ್ಡು ಮಾಡೋಕೆ ಅಲ್ಲ : ನಟ ಸುದೀಪ್

ಮತದಾನ ಯಶಸ್ವಿಯಾಗಿ ಮುಗಿಯಿತು. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಮಸ್ತ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ಕೃತಜ್ಞತೆಗಳು. ಮಾಧ್ಯಮ ಮಿತ್ರರಿಗೆ ಮನಪೂರ್ವಕ ಧನ್ಯವಾದಗಳು ಎಂದರು.

ಈ ಸಭೆಯಲ್ಲಿ ಮಾಜಿ ಶಾಸಕರಾದ ಎಂ. ರಾಜಣ್ಣ, ಮಳಮಾಚನಹಳ್ಳಿ, ಡಾ.ಜಯರಾಮ್‌, ಸಹೋದರ ಸೀಕಲ್‌ ಆನಂದ ಗೌಡ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ವತಿಯಿಂದ ನಾಳೆ (ಮೇ 13, ಶನಿವಾರ) ನಡೆಯುವ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುರಿತು ಚಿಕ್ಕಬಳ್ಳಾಪುರದಲ್ಲಿ ನಡೆದ ಎಣಿಕೆ ಏಜೆಂಟರ ಕಾರ್ಯಗಾರದಲ್ಲಿ ಸೀಕಲ್ ರಾಮಚಂದ್ರಗೌಡ ಅವರು ಭಾಗವಹಿಸಿದರು.

RELATED ARTICLES

Related Articles

TRENDING ARTICLES