Thursday, January 9, 2025

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಂದೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್​ ತಾಲ್ಲೂಕಿನಲ್ಲಿ ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಪತ್ನಿ ಶೋಕಿಗೆ ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದ್ದು ಮೃತ ದುರ್ದೈವಿಗಳನ್ನು ಹರೀಶ್ (35) ಪ್ರಜ್ವಲ್(6) ರಿಷಬ್(4) ಎಂದು ಗುರುತು ಹಿಡಿಯಲಾಗಿದೆ.

ಘಟನೆ ಮೇ 10ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಹರೀಶ್​ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ಕಾಲವಾದ ನಂತರ ಬರಬೇಕಾಗಿರುವ ಹಣ ಹಾಗೂ ಎಲ್​ಐಸಿ ಬಾಂಡ್​ಅನ್ನು ಪತ್ನಿಗೆ ನೀಡುವಂತೆ ಹೇಳಿದ್ದಾರೆ.

ಇದನ್ನೂ ಓದಿ : ರೂಮಿನ ಕೀ ಕೊಟ್ಟು ಮಂಚಕ್ಕೆ ಬಾ.. ಎಂದ ಇನ್ಸ್ ಪೆಕ್ಟರ್!

ಹರೀಶ್​ ಕರೆ ಮಾಡಿರುವ ಲೊಕೇಷನ್​ ಬಗ್ಗೆ ಸ್ನೇಹಿತ ಹುಡುಕಾಟ ನಡೆಸಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಎರಡು ದಿನಗಳ ಬಳಿಕ ಜಿಗಣಿ ಪೊಲೀಸ್​ ಠಾಣಾ ವ್ಯಾಪ್ತಿಯ ಕೊಪ್ಪ ಸಮೀಪದ ನಿರ್ಮಾಣ ಬಡಾವಣೆಯಲ್ಲಿ ಇರುವುದು ತಿಳಿದು ಬಂದಿದೆ.

ಅಪಘಾತದಲ್ಲಿ ಇಬ್ಬರು ಸಾವು

ಶಿವಮೊಗ್ಗ ಜಿಲ್ಲೆಯ ಚೋರಡಿ ಕುಂಸಿಯ ಸೇತುವೆ ಬಳಿ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಈ ದುರ್ಘಟನೆಯಲ್ಲಿ ಬಸ್ ನಲ್ಲಿದ್ದಂತ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

RELATED ARTICLES

Related Articles

TRENDING ARTICLES