Saturday, December 28, 2024

‘ನಂಗೆ 37 ಆಯ್ತು, ನೀವಿನ್ನೂ 19’ ಅಂತೀರಿ ಅಂದರೇಕೆ ಯಶ್?

ಬೆಂಗಳೂರು : ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಯಶ್-19 ಬಗ್ಗೆ ಸ್ವತಃ ರಾಕಿಭಾಯ್ ಅವರೇ ಬಾಯ್ಬಿಟ್ಟಿದ್ದಾರೆ. ಅರೇ.. ಕೆಜಿಎಫ್-2 ಬಳಿಕ ಇಡೀ ವರ್ಲ್ಡ್​ ಸಿನಿದುನಿಯಾ ಎದುರು ನೋಡ್ತಿದ್ದ ಆ ನೂತನ ಸಿನಿಮಾ ಬಗ್ಗೆ, ನ್ಯಾಷನಲ್ ಸ್ಟಾರೇ ಮಾತಾಡಿದ್ರಾ? ಇಲ್ಲಿದೆ ನೊಡಿ ಮಾಹಿತಿ.

ಕೆಜಿಎಫ್ ಚಾಪ್ಟರ್-2 ತೆರೆಕಂಡು ಬರೋಬ್ಬರಿ ವರ್ಷ ಕಳೆಯಿತು. ಆದರೂ ರಾಕಿಭಾಯ್ ಯಶ್ ಮಾತ್ರ ತಮ್ಮ ಮುಂದಿನ ಚಿತ್ರದ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿಲ್ಲ. ಯಾವುದಕ್ಕೂ ಕಮಿಟ್ ಕೂಡ ಆಗಿಲ್ಲ. ಆದರೆ, ಅವರು ವರ್ಷದಿಂದ ಸುಮ್ಮನೆ ಕೈಕಟ್ಟಿ ಕೂತಿಲ್ಲ ಅನ್ನೋದು ಮಾತ್ರ ಕನ್ಫರ್ಮ್​.

ಇದೀಗ ಎಲ್ಲರ ಚಿತ್ತ ಯಶ್ 19ನೇ ಸಿನಿಮಾ ಯಾವುದಾಗಲಿದೆ ಅನ್ನೋದರ ಮೇಲೆ ನೆಟ್ಟಿದೆ. ಆದರೆ, ಅದು ಯಾರ ಜೊತೆ? ಯಾವುದು? ಯಾವಾಗ? ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತಿಲ್ಲ. ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬಂದ ಯಶ್​ಗೆ ಫ್ಯಾನ್ಸ್ ಮುಗಿ ಬಿದ್ದರು. ಸೆಲ್ಫಿಗಾಗಿ ನಾ ಮುಂದು, ತಾ ಮುಂದು ಅಂತ ನೂಗು ನುಗ್ಗಲು ಮಾಡಿದ್ದರು.

ಇದನ್ನೂ ಓದಿ : ‘ನನಗೆ ಹುಡ್ಗ ಬೇಕು, ಸ್ವಯಂವರ’ ಏರ್ಪಾಟು ಮಾಡಿ : ನಟಿ ರಮ್ಯಾ

ಮ್ಯಾಟರ್​ ತೇಲಿಸಿಬಿಟ್ಟ ಯಶ್

ಮತದಾನದ ಬಳಿಕ ಮಾತನಾಡಿದ ನಟ ಯಶ್, ತಮ್ಮ ನೆಕ್ಟ್ ಪ್ರಾಜೆಕ್ಟ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ನಾನೀಗ 37. ನೀವಿನ್ನೂ 19 ಅಂತಿದ್ದೀರಿ ಅಂತ ಉತ್ತರ ಕೊಡೋ ಮೂಲಕ ಆ ಮ್ಯಾಟರ್​ನ ತೇಲಿಸಿಬಿಟ್ಟರು. ಅಷ್ಟೇ ಅಲ್ಲ, ಈ ಬಾರಿಯ ಕ್ಯಾಂಪೇನ್​ಗಳಲ್ಲಿ ಭಾಗಿಯಾಗದಿರೋದಕ್ಕೆ ಕಾರಣ ಕೂಡ ತಿಳಿಸಿದರು.

19ನೇ ಸಿನಿಮಾಗೆ ಇವರೇ ಌಕ್ಷನ್ ಕಟ್

ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳೋದು ಬಿಟ್ಟರೆ ಯಶ್ ಮಾತ್ರ ಬೇರೆಲ್ಲೂ ಕಾಣಸಿಗೋದಿಲ್ಲ. ಸಿನಿಮಾ ಕೂಡ ಅನೌನ್ಸ್ ಆಗಲಿಲ್ಲ. ಆದ್ರೆ ಒಂದಷ್ಟು ಅಧಿಕೃತ ಮೂಲಗಳ ಪ್ರಕಾರ ಕೆಜಿಎಫ್ ಚಾಪ್ಟರ್-3ಗೂ ಮುನ್ನ ಅವರ 19ನೇ ಸಿನಿಮಾಗೆ ಅವರೇ ಌಕ್ಷನ್ ಕಟ್ ಹೇಳ್ತಾರೆ ಎನ್ನಲಾಗುತ್ತಿದೆ.

ಅಪಾರ ಸಿನಿಮೋತ್ಸಾಹಿ ಆಗಿರೋ ಯಶ್, ತಮ್ಮ ಚಿತ್ರದಲ್ಲಿ ನಟಿಸೋದ್ರ ಜೊತೆ ಎಲ್ಲಾ ಡಿಪಾರ್ಟ್​ಮೆಂಟ್​ಗಳಲ್ಲೂ ಕೆಲಸ ಮಾಡುತ್ತಾರೆ. ಎಡಿಟಿಂಗ್, ಪ್ರಮೋಷನ್ಸ್, ಮ್ಯೂಸಿಕ್, ಫೈಟ್ಸ್ ಸೇರಿದಂತೆ ಎಲ್ಲವನ್ನೂ ಪ್ಲಾನ್ಡ್ ಆಗಿ ಟೀಂ ಜೊತೆ ಚರ್ಚಿಸಿ ಮಾಡುತ್ತಾರೆ. ಹಗಲಿರುಳು ಸಿನಿಮಾಗಾಗಿ ತನು ಮನ ಧನವನ್ನು ಮುಡಿಪಾಗಿಡೋ ರಾಕಿಭಾಯ್, ತಮ್ಮ ನಯಾ ಚಿತ್ರಕ್ಕೆ ತಾವೇ ಕ್ಯಾಪ್ಟನ್ ಆದರೂ ಅಚ್ಚರಿಯಿಲ್ಲ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES