Sunday, December 22, 2024

ಎಲೆಕ್ಷನ್, ಐಪಿಎಲ್ ನಡುವೆಯೂ ಸಿನಿಪ್ರಿಯರಿಗೆ ಡಬಲ್​ ಧಮಾಕ

ಬೆಂಗಳೂರು :  ಈ ವಾರ ಟಾಲಿವುಡ್​ನ ಇಬ್ಬರು ಸ್ಟಾರ್​ಗಳ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗಪ್ಪಳಿಸೋ ಮೂಲಕ ಬಾಕ್ಸ್ ಆಫೀಸ್ ಅಖಾಡಕ್ಕೆ ಸಜ್ಜಾಗಿವೆ.

ಹೌದು, ಒಬ್ರು ಬಾಲಿವುಡ್​ಗೆ ಲಗ್ಗೆ ಇಟ್ರೆ, ಮತ್ತೊಬ್ರು ಪಕ್ಕದ ಕಾಲಿವುಡ್​ಗೆ ಕಾಲಿಡ್ತಿದ್ದಾರೆ. ಆದ್ರೆ ಬಾಕ್ಸ್ ಆಫೀಸ್​ನ ಛತ್ರಪತಿ ಕಸ್ಟಡಿಗೆ ತಗೊಳ್ತಾರಾ ಅಥ್ವಾ ನಾಗಚೈತನ್ಯ ತಗೋತಾರಾ ಅನ್ನೋದೇ ಯಕ್ಷ ಪ್ರಶ್ನೆ.

ಇನ್ನೂ  ಎಲೆಕ್ಷನ್, ಐಪಿಎಲ್ ನಡುವೆ ಸಿನಿಪ್ರಿಯರಿಗೆ ಮನರಂಜನೆಯ ಕೊರತೆ ಆಗಿತ್ತು. ಇದೀಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಹಿನ್ನೆಲೆ ಸಾಕಷ್ಟು ಸಿನಿಮಾಗಳು ರಿಲೀಸ್​ಗಾಗಿ ಸಾಲುಗಟ್ಟಿ ನಿಂತಿವೆ. ಆ ಪೈಕಿ ಬಾಲಿವುಡ್​ನ ಛತ್ರಪತಿ ಹಾಗೂ ತೆಲುಗಿನ ಕಸ್ಟಡಿ ಸಿನಿಮಾಗಳು ಸದ್ಯ ಟಾಕ್ ಆಫ್ ದಿ ಟೌನ್ ಆಗಿವೆ.

ಎರಡೂ ಸಹ ಡಿಫರೆಂಟ್ ಜಾನರ್ ಚಿತ್ರಗಳಾಗಿದ್ದು, ಒಂದಕ್ಕಿಂತ ಒಂದು ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿವೆ. ಟ್ರೈಲರ್, ಟೀಸರ್ ಹಾಗೂ ಸಾಂಗ್ಸ್​ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಈ ಸಿನಿಮಾಗಳು ಇದೇ ಶುಕ್ರವಾರ, ಅಂದ್ರೆ ಮೇ 12ರಂದು ವರ್ಲ್ಡ್​ವೈಡ್ ಏಕಕಾಲದಲ್ಲಿ ರಿಲೀಸ್ ಆಗ್ತಿವೆ.

ಛತ್ರಪತಿ ಸಿನಿಮಾದಿಂದ ತೆಲುಗಿನ ಬೆಲ್ಲಂಕೊಂಡ ಶ್ರೀನಿವಾಸ್ ಬಾಲಿವುಡ್​ಗೆ ಲಗ್ಗೆ ಇಟ್ಟರೆ, ಕಸ್ಟಡಿ ಚಿತ್ರದಿಂದ ಕಿಂಗ್ ನಾಗಾರ್ಜುನ್​ರ ಪುತ್ರ ನಾಗಚೈತನ್ಯ ಪಕ್ಕದ ತಮಿಳು ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ.  ಹೌದು.. ಪ್ರಭಾಸ್​- ರಾಜಮೌಳಿಯ ಛತ್ರಪತಿ ಸಿನಿಮಾನ ಹಿಂದಿಗೆ ರಿಮೇಕ್ ಮಾಡಿರೋ ಬೆಲ್ಲಂಕೊಂಡ ಶ್ರೀನು, ಮಾಸ್ ಹೀರೋ ಆಗಿ ರೆಬೆಲ್ ಛತ್ರಪತಿಯಾಗಿ ದೊಡ್ಡ ಪರದೆ ಮೇಲೆ ಅಬ್ಬರಿಸಲಿದ್ದಾರೆ.

ತೆಲುಗು ಹಾಗೂ ತಮಿಳು ಎರಡು ಭಾಷೆಯಲ್ಲಿ ತಯಾರಾಗಿರೋ ಕಸ್ಟಡಿ ಸಿನಿಮಾ, ಒಬ್ಬ ಸಾಮಾನ್ಯ ಪೊಲೀಸ್ ಪೇದೆಯ ಕುರಿತ ಕಥಾನಕ ಹೊಂದಿದೆ. ಪೊಲೀಸ್ ವ್ಯವಸ್ಥೆಯ ಇನ್​ಸೈಡ್ ಸ್ಟೋರಿ ಇದಾಗಿದ್ದು, ನಾಗಚೈತನ್ಯ ಕರಿಯರ್​ನ ವೆರೈಟಿ ಸಿನಿಮಾಗಳಲ್ಲಿ ಒಂದಾಗಿ ನಿಲ್ಲಲಿದೆ ಕಸ್ಟಡಿ. ವೆಂಕಟ್ ಪ್ರಭು ನಿರ್ದೇಶನದಲ್ಲಿ ಕಸ್ಟಡಿ ನಿಜಕ್ಕೂ ಹುಬ್ಬೇರಿಸೋ ರೇಂಜ್​ಗೆ ತಯಾರಾಗಿ ರಿಲೀಸ್ ಅಂಚಿನಲ್ಲಿದೆ.

ಅಂದಹಾಗೆ ನಾಗಚೈತನ್ಯ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದ್ದು, ಇಬ್ಬರೂ ತೆಲುಗು ಇಂಡಸ್ಟ್ರಿಯ ಕಲಾವಿದರೇ ಅನ್ನೋದು ವಿಶೇಷ. ಕಂಟೆಂಟ್ ಹಾಗೂ ಮೇಕಿಂಗ್​ನಿಂದ ಇವೆರಡೂ ಚಿತ್ರಗಳು ದೊಡ್ಡ ಭರವಸೆ ಮೂಡಿಸಿದ್ದು, ಬಾಕ್ಸ್ ಆಫೀಸ್​ನ ಯಾವ ಹೀರೋ ಕಸ್ಟಡಿಗೆ ತೆಗೆದುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

 

 

RELATED ARTICLES

Related Articles

TRENDING ARTICLES