Saturday, April 20, 2024

ಶತಾಯುಷಿ ಸಾಲುಮರದ ತಿಮಕ್ಕ, ಸುಕ್ರಿ ಬೊಮ್ಮಗೌಡರಿಂದ ಮತದಾನ

ಬೆಂಗಳೂರು : ರಾಜ್ಯ ವಿಧಾನಸಭೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಯುವಕರನ್ನು ನಾಚಿಸುವಂತೆ ಹಿಯರು ಮತದಾನ ಮಾಡಿದ್ದಾರೆ.

ಶತಾಯುಷಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮಕ್ಕ ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ಸಾವಿರಾರು ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಬೆಳೆಸಿದ ಮಹಾನ್ ಜೀವಿ, ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಸಾಲು ಮರದ ತಿಮ್ಮಕ್ಕ ಅವರು ಮತದಾನದ ಕುರಿತು ಜಾಗೃತಿ ಮೂಡಿಸಿದ್ದರು.

ಸುಕ್ರಿ ಬೊಮ್ಮಗೌಡರಿಂದ ಮತದಾನ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 182ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಮತದಾನ ಮಾಡಿದ್ದಾರೆ.

ಇದನ್ನೂ ಓದಿ : 55 ವರ್ಷಗಳಿಂದ ಇದೇ ಬೂತ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತದಾನ

ಪತ್ನಿಯೊಂದಿಗೆ ಎಚ್ ಡಿಡಿ ಮತ

ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಹಾಸನ ಜಿಲ್ಲೆಯ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 251 ರಲ್ಲಿ ಪತ್ನಿ ಚನ್ನಮ್ಮ ಅವರೊಂದಿಗೆ ಮತ ಚಲಾಯಿಸಿದರು.

ಮತದಾನದ ಬಳಿಕ ಮಾತನಾಡಿರುವ ದೇವೇಗೌಡರು, ನನ್ನ ಹುಟ್ಟೂರು ಕುಗ್ರಾಮ. ಇಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಯೂ ಆಗಿದೆ. ಇದರ ಕೀರ್ತಿ ಪುತ್ರ ಎಚ್.ಡಿ ರೇವಣ್ಣಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ನವದಂಪತಿ ಮತದಾನ

ಬೆಂಗಳೂರು ನಗರದಲ್ಲಿ ನವ ದಂಪತಿ ಮತದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ. ನೂತನ ನವದಂಪತಿಗಳಾದ ಕಿರಣ್, ಹರ್ಷಿತಾ ಒಟ್ಟಿಗೆ ಮತದಾನ ಮಾಡಿದ್ದಾರೆ. ಮದುವೆ ಮುಗಿದ ಬಳಿಕ ಕಲ್ಯಾಣ ಮಂಟಪದಿಂದ ನೇರವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

RELATED ARTICLES

Related Articles

TRENDING ARTICLES