Wednesday, January 22, 2025

ಕರ್ನಾಟಕದಲ್ಲಿ ‘ಕೈ’ ಹಿಡಿದ ಸಮೀಕ್ಷೆ : ಕಾರ್ಯಕರ್ತರಿಗೆ ರಾಗಾ ಶುಭ ಹಾರೈಕೆ

ಬೆಂಗಳೂರು : ಇಂದು ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಅಂತ್ಯವಾಗಿದೆ. ಇದೀಗ, ವಿವಿಧ ರಾಷ್ಟ್ರೀಯ ಸುದ್ದಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ರವಾನಿಸಿರುವ ರಾಗಾ, ಪಕ್ಷದ ಸಾಹಸಿ ಕಾರ್ಯಕರ್ತರು ಹಾಗೂ ಸಂಘನಾತ್ಮಕ ನಾಯಕತ್ವದಿಂದ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನೂ, ಪ್ರಗತಿದಾಯಕ ಭವಿಷ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದ ರಾಜ್ಯದ ಎಲ್ಲಾ ಮತದಾರರಿಗೆ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಟ್ವೀಸ್ ಮಾಡಿದ್ದಾರೆ.

ಇದನ್ನೂ ಓದಿ : ಮತದಾನ ಮಾಡಿ ಪೋಸ್ ಕೊಟ್ಟ ಕೇಸರಿ ಕಲಿಗಳು : ಇಲ್ಲಿವೆ ಫೋಟೋಗಳು

EXIT POLL 2023

BJP-CON-JDS-OTH

ರಿಪಬ್ಲಿಕ್-CP MARQ : 85-100, 94-108, 24-32, 2-6
ಜನ್ ಕೀ ಬಾತ್ : 94-117, 91-106, 14-24, 0-0
C-ವೋಟರ್‌-P-MARQ : 83-95, 100-112, 21-29, 2-6
ಜೀ- MATRIZE :103-118, 79-94, 25-33, 2-5
CGS :114, 86, 21, 0-3
ಪೋಲ್‌ ಸ್ಟ್ರ್ಯಾಟ್ : 88-98, 99-109, 21-26, 0-4
NEWS NATION : 114, 86, 21, 3
ಜನ್ ಕೀ ಬಾತ್ : 94-117, 91-106, 14-24, 00
ಎಬಿಪಿ ನ್ಯೂಸ್ : 83-95, 100-112, 21-29, 2-6
POLL OF POLL : 86-99, 96-108, 22-30, 2-5
CNN NEWS : 96, 102, 24, 3
ETG 106 : 120, 78-92, 20-26, 2-4
TIMES NOW : 85, 113, 23, 3

RELATED ARTICLES

Related Articles

TRENDING ARTICLES