Sunday, November 24, 2024

ವೋಟರ್ ಐಡಿ ಇಲ್ಲದಿದ್ದರೂ ಮತದಾನ ಮಾಡಬಹುದೇ…? ಇಲ್ಲಿದೆ ಸಂಪೂರ್ಣ ಮಾಹಿತಿ 

ಬೆಂಗಳೂರು:  ಇಂದು ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Eelctions 2023)ಗೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯ 224 ಕ್ಷೇತ್ರಗಳಲ್ಲಿ ಇಂದು ಮತದಾರರು ಮತ ಚಲಾಯಿಸಲಿದ್ದಾರೆ.

ಹೌದು , ನೀವು ಇಂದು ಮತದಾನ ಮಾಡಲು ಮತಗಟ್ಟೆಗೆ ಹೋದಗ ನಿಮ್ಮ ಬಳಿ ಗುರುತಿನ ಚೀಟಿ(identity card) ಇಲ್ಲದಿದ್ದರೂ ಸಹ ನೀವು ಮತದಾನ ಮಾಡಬಹುದು.

ಈ ಕೆಳಗಿನ ಯಾವುದಾದರೊಂದು ದಾಖಲೆ ಇದ್ದರೆ ನೀವು ಮತ ಚಲಾಯಿಸಬಹುದು.

  • ಪಾಸ್ಪೋರ್ಟ್
  • ಆಧಾರ್​ ಕಾರ್ಡ್​
  • ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ
  • ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್
  • ಪಾನ್ ಹೊಂದಿರುವ ಕಾರ್ಡ್
  • ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್
  • ಎಂನರೇಗಾ ಜಾಬ್ ಕಾರ್ಡ್
  • ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
  • ಫೋಟೋವುಳ್ಳ ಪಿಂಚಣಿ ದಾಖಲೆ
  • ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್
  • ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
  • ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.

 

RELATED ARTICLES

Related Articles

TRENDING ARTICLES