Wednesday, January 22, 2025

Voting Awareness : ವಿವಿಧ ಕಲಾವಿದರಿಂದ ಮತದಾನದ ಅರಿವು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಇನ್ನೂ ಕೆಲವು ಗಂಟೆಗಳು ಮಾತ್ರ ಬಾಕಿ ಇದೆ. ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಸ್ಯಾಂಡಲ್​ ವುಡ್​ ಸ್ಟಾರ್​ಗಳು ತಮ್ಮ ಸೋಶಿಯಲ್ ಮೀಡಿಯಾ  ಹ್ಯಾಂಡಲ್​ಗಲನ್ನು ಬಳಸಿಕೊಂಡು ಜಾಗೃತಿ ಮೂಡಿಸಿದ್ದಾರೆ.

ಹೌದು,  ಕಲಾವಿದರು ಎಲ್ಲರೂ  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರು ಮತದಾರರಿಗೆ ತಪ್ಪದೇ ಮತದಾನ ಮಾಡುವಂತೆ ವಿವಿಧ ತಾರೆಯರು ಕರ್ನಾಟಕದ ಸಮಸ್ತ ಜನತೆಗೆ ಮನವಿ ಮಾಡಿ ಅರಿವು ಮೂಡಿಸಿದ್ದಾರೆ.

ತಮ್ಮ ವಿಭಿನ್ನ ನಟನಾ ಶೈಲಿಯಿಂದ ಭಾರತದಾದ್ಯಂತ ಖ್ಯಾತಿ ಪಡೆದ ಕನ್ನಡಿಗರ ಪ್ರೀತಿಯ ನಟ ಮತ್ತು ನಿರ್ದೇಶಕರಾದ ರಮೇಶ್​ ಅರವಿಂದ್ ಅವರು ಮತದಾನದ ಕುರಿತು ಜಾಗೃತಿ ಮೂಡಿಸಿದ್ದಾರೆ.

ದಾಸರ ಪದಗಳನ್ನು ಮತ್ತು ಇತರೆ ಗೀತೆಗಳನ್ನು ಜಾನಪದ ಶೈಲಿಯಲ್ಲಿ ಹಾಡಿ ವೈವಿಧ್ಯಮಯ ರೀತಿಯಲ್ಲಿ ಜನರನ್ನು ರಂಜಿಸುತ್ತಿರುವ ಕಲಾವಿದರಾದ ವಾಸು ದೀಕ್ಷಿತ್ ಅವರು ಮತದಾನದ ಜಾಗೃತಿ ಮೂಡಿಸಿದ್ದಾರೆ.

 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದರಾದ ಮಂಜಮ್ಮ ಜೋಗತಿ ನಮ್ಮ ಕರ್ನಾಟಕದ ಹೆಮ್ಮೆ. ಅವರು ಮತದಾನದ ಜಾಗೃತಿ ಮೂಡಿಸಿದ್ದಾರೆ.

ಭಾರತದ ಖ್ಯಾತ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್ ಅವರು ಕರ್ನಾಟಕದ ಜನರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

“ನಮ್ಮ ನಡೆ ಮತಗಟ್ಟೆ ಕಡೆ ” ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರೊಂದಿಗೆ ಜೊತೆಗೂಡಿ ಮತದಾನ ಕುರಿತು ಜಾಗ್ರತಿ ಮಾಡಲಾಯಿತು.

ಸಾವಿರಾರು ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಬೆಳೆಸಿದ ಮಹಾನ್ ಜೀವಿ, ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಕರ್ನಾಟಕದ ಜನತೆಯ ಪ್ರೀತಿಯ ಸಾಲು ಮರದ ತಿಮ್ಮಕ್ಕನವರು ಮತದಾನದ ಕುರಿತು ಮಾತನಾಡಿದ್ದಾರೆ.

ಅತ್ಯುತ್ತಮ ಕಲಾವಿದರಾದ ಕಿಶೋರ್ ಅವರು ತಮ್ಮ ನಟನಾ ಕೌಶಲ್ಯದಿಂದ ಬಹುಭಾಷೆಗಳಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಅವರು ಕರ್ನಾಟಕದ ಜನರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES