Wednesday, January 22, 2025

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆಗೆ ಖಾಕಿ ಹೈ ಅಲರ್ಟ್‌

ಬೆಂಗಳೂರು : ಜನತಂತ್ರ ಹಬ್ಬಕ್ಕೆ (Karnataka Assembly Election) ಕೌಂಟ್‌ಡೌನ್ ಶುರುವಾಗಿದೆ. ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಪ್ರಜಾಪ್ರಭುತ್ವದ ಹಬ್ಬ ಕರ್ನಾಟಕದ ಮೂಲೆ ಮೂಲೆಯಲ್ಲಿ ಖಾಲಿ ಹೈಅಲರ್ಟ್ ಆಗಿದೆ.

ಹೌದು, ಈಗಾಗಲೇ ಚುನಾವಣೆ ಆಯೋಗ ಎಲ್ಲಾ ಸಮಸ್ಸೆಗಳನ್ನು ಎದುರಿಸಲು ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

ಚುನಾವಣೆಯ ಭದ್ರತೆಗಾಗಿ 1.56 ಲಕ್ಷ ಪೊಲೀಸರ ನಿಯೋಜನೆ ಮಾಡಿ 700 ಸ್ಕ್ವಾಡ್, 700 ಚೆಕ್​ಪೋಸ್ಟ್​ಗಳ ನಿರ್ಮಾಣ ಕೂಡ ಚುನಾವಣಾ ಆಯೋಗ ಮಾಡಿದೆ.

ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆಗಳ ನಿರ್ಮಾಣ

ರಾಜ್ಯದಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. 2930 ಪೊಲೀಸ್ ಮೊಬೈಲ್ ಸೆಕ್ಟರ್​​​​ಗಳ ಕಾರ್ಯಾಚರಣೆ ಮಾಡಲಿದ್ದಾರೆ . ಇದರ ಜೊತೆಗೆ 700 ಫ್ಲೈಯಿಂಗ್ ಸ್ಕ್ವಾಡ್, 700 ಚೆಕ್​​ಪೋಸ್ಟ್​ಗಳ ನಿರ್ಮಾಣ ಹಾಗೂ ನೆರೆ ರಾಜ್ಯಗಳ ಪೊಲೀಸರೊಂದಿಗೆ ಸಭೆ ನಡೆಸಿರುವ ಅಧಿಕಾರಿಗಳು  ರಾಜ್ಯದ ಗಡಿಗಳಲ್ಲಿ ವಾಹನ ತಪಾಸಣೆ ಮಾಡಿ ಒಳ ಬಿಡಲು ಸೂಚನೆ ನೀಡಿದ್ದಾರೆ.

ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ,ಮಹಾರಾಷ್ಟ್ರ, ಕೇರಳ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ರಾಜ್ಯದಲ್ಲಿ  ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

RELATED ARTICLES

Related Articles

TRENDING ARTICLES