Wednesday, January 22, 2025

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ : ‘ಮದಗಜಗಳ ಕಾಳಗ’ದಲ್ಲಿ ಗೆಲ್ಲೋದು ಯಾರು?

ಬೆಂಗಳೂರು : ಐಪಿಎಲ್ ನ ಇಂದಿನ ರೋಚಕ ಕಾಳಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯ್ಸ್ ಮುಖಾಮುಖಿಯಾಗಲಿದೆ. ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ (ಫೀಲ್ಡಿಂಗ್) ಆಯ್ದುಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಜಿದ್ದಾಜಿದ್ದಿನ ಮ್ಯಾಚ್ ನಡೆಯಲಿದೆ. ಆರ್‌ಸಿಬಿಗೆ ಗೆಲುವು ಅನಿವಾರ್ಯವಾಗಿದೆ. ಇತ್ತ, ಇಂದಿನ ಪಂದ್ಯದಲ್ಲಿ ಆರ್ ಸಿಬಿಯನ್ನು ಬಗ್ಗುಬಡಿದು ಅಂಕಪಟ್ಟಿಯಲ್ಲಿ ನಾಲ್ಕನೇ ಅಗ್ರಸ್ಥಾನಕ್ಕೇರಲು ಮುಂಬೈಕರ್ ರೋಹಿತ್ ಪಡೆ ರಣತಂತ್ರ ರೂಪಿಸಿದೆ.

ಈ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನೂ ರೋಹಿತ್ ಪಡೆ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 10 ಅಂಕದೊಂದಿಗೆ 8ನೇ ಸ್ಥಾನ ಪಡೆದುಕೊಂಡಿದೆ. ಪ್ಲೇ-ಆಫ್ ಲೆಕ್ಕಾಚಾರ ಹತ್ತಿರದಲ್ಲೇ ಇರುವುದರಿಂದ ಇಂದಿನ ಕಾಳಗ ಇತ್ತಂಡಗಳಿಗೂ ಮಹತ್ವದ್ದಾಗಿದೆ.

ಇದನ್ನೂ ಓದಿ : ಮೆಸ್ಸಿ ಮುಡಿಗೆ ‘ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ’

ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ವೈಶಾಕ್ ವಿಜಯ್ ಕುಮಾರ್, ಮೊಹಮ್ಮದ್ ಸಿರಾಜ್, ಹ್ಯಾಜಲ್​ವುಡ್

ಮುಂಬೈ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ನೇಹಲ್ ವಡೇರಾ, ಕ್ರಿಸ್ ಜೋರ್ಡನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮದವಾಲ್

RELATED ARTICLES

Related Articles

TRENDING ARTICLES