ಬೆಂಗಳೂರು : ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಅವರ ಸ್ಫೋಟಕ ಆಟದ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 199 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಮುಂಬೈ ತಂಡ ಗೆಲ್ಲಲು 200 ರನ್ ಮಾಡಬೇಕಿದೆ.
ಆರ್ ಸಿಬಿ ಪರ ಮ್ಯಾಕ್ಸ್ ವೆಲ್ 68 ಹಾಗೂ ನಾಯಕ ಡುಪ್ಲೆಸಿಸ್ ಅವರು 65 ರನ್ ಗಳ ಭರ್ಜರಿ ಅರ್ಧಶತಕ ದಾಖಲಿಸಿದರು. ಅಲ್ಲದೆ, ಭರ್ಜರಿ ಪ್ರದರ್ಶನ ತೋರುವ ಮೂಲಕ ಶತಕದ ಜೊತೆಯಾಟ ನೀಡಿ ಮುಂಬೈ ಬೌಲರ್ ಗನ್ನು ಚಂಡಾಡಿದರು.
ಉಳಿದಂತೆ ದಿನೇಶ್ ಕಾರ್ತಿಕ್ 30, ಕೇದಾರ್ ಜಾದವ್ 12, ವನಿಂದು ಹಸರಂಗ 12, ಅನುಜ್ ರಾವತ್ 6, ವಿರಾಟ್ ಕೊಹ್ಲಿ 1 ರನ್ ಗಳಿಸಿದರು. ಮುಂಬೈ ಪರ ಜೇಸನ್ 3 ವಿಕೆಟ್, ಕಾರ್ತಿಕೇಯ ಹಾಗೂ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ : ಎರಡು ವಿಶೇಷ ದಾಖಲೆ ಹೊಸ್ತಿಲಿನಲ್ಲಿ ‘ಕಿಂಗ್ ಕೊಹ್ಲಿ’
I think this whole incident will be a lesson for Virat Kohli. pic.twitter.com/vj4T7alLg5
— KKR Karavan (@KkrKaravan) May 9, 2023
ವಿರಾಟ್ ಔಟ್, ‘ಸ್ವೀಟ್ ಮ್ಯಾಂಗೋಸ್‘ ಎಂದ ನವೀನ್
ಇನ್ನೂ ಮುಂಬೈ ವಿರುದ್ಧ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಕೊಹ್ಲಿ ಔಟಾದ ತಕ್ಷಣ ಲಖನೌ ಆಟಗಾರ ನವೀನ್ ಉಲ್ ಹಕ್ ಅವರು ತಮ್ಮ ಇನ್‌ಸ್ಟಾ ಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಆ ಮೂಲಕ ಕಿಂಗ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಾವಿನ ಹಣ್ಣುಗಳನ್ನು ತಿನ್ನುತ್ತಾ, ‘ಸ್ವೀಟ್ ಮ್ಯಾಂಗೋಸ್’ ಎಂದು ಸ್ಟೋರಿಗೆ ತಲೆ ಬರಹ (ಟೈಟಲ್) ಕೊಟ್ಟಿದ್ದಾರೆ. ಇದು ಕೊಹ್ಲಿ ಉದ್ದೇಶಿಸಿ ಎಂದು ನೆಟ್ಟಿಗರು ಕಾಮೆಂಟ್ ಹರಿಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಸೈಲೆಂಟ್ ಆಗಿದ್ದರೂ ನವೀನ್ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.