Thursday, December 19, 2024

ಗುಡ್ ನ್ಯೂಸ್ : ನಾಳೆ ಗೋವಾದಲ್ಲಿ ವೇತನ ಸಹಿತ ರಜೆ ಘೋಷಣೆ

ಬೆಂಗಳೂರು : ಗೋವಾದಲ್ಲಿ ಸಾಕಷ್ಟು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಈ ದೃಷ್ಟಿಯಿಂದ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ.

ಹೌದು, ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ನಾಳೆ ಮಹತ್ವದ ದಿನವಾಗಿದೆ. ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಮತದಾರರು ರಾಕ್ಯದ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಕಾತರರಾಗಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಚುನಾವಣಾ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಗೋವಾ ಸರ್ಕಾರವು ಸಹ ಸಾಥ್​ ನೀಡಿದೆ. ನಾಳೆ ರಾಜ್ಯದಲ್ಲಿ ನಡೆಯುವ ಮತದಾನಕ್ಕೆ ಗೋವಾ ಸರ್ಕಾರ ಸಹ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ. ನಾಳೆ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ರಜೆ ಘೋಷಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ನಿಮ್ಮ ‘ಕೈ’ ಬೆರಳಿಗೆ ಹಚ್ಚುವ ಶಾಯಿ ತಯಾರಾಗುವುದು ಎಲ್ಲಿ? : ಇಲ್ಲಿದೆ ಮಾಹಿತಿ

ಮತದಾರರಿಗೆ ಹಂಚಲು ತಂದಿದ್ದ ನಗದು ವಶ

ಮತದಾರರಿಗೆ ಹಂಚಲು ತಂದಿದ್ದ ಜೆಡಿಎಸ್ ಪಕ್ಷದ ಹಣ ಸೀಜ್ ಮಾಡಿರುವ ಘಟನೆ ಶಿವಮೊಗ್ಗದ ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಸಾವಿರಾರು ರೂ. ಗಳ ಬಂಡಲ್​​​ನ್ನು ಸೀಜ್​​ ಮಾಡಿದ್ದಾರೆ.

ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಬಂದಿದ್ದ ಹಣದ ಬಂಡಲ್ ಸೀಜ್ ಮಾಡಿದ್ದಾರೆ. ವಾಹ‌ನ ಯಾರದ್ದೆಂದು ಇನ್ನು ತಿಳಿದು ಬಂದಿಲ್ಲ. ಹಣದ ಬಂಡಲ್ ಜೊತೆಗೆ ಇದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಭಾವಚಿತ್ರವಿರುವ ಪಾಂಪ್ಲೆಟ್​​​ಗಳು ಸಿಕ್ಕಿವೆ. ಸ್ಥಳೀಯರು ಪೊಲೀಸರನ್ನು ಕರೆಸಿ ಹಣ ಮತ್ತು ದ್ವಿಚಕ್ರ ವಾಹನ ಹಿಡಿದುಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES