Monday, December 23, 2024

ನಾಳೆ ವೋಟಿಂಗ್​ ಎಫೆಕ್ಟ್​​​.. KSRTC ಬಸ್​ಗೆ ಭಾರೀ ​ಡಿಮ್ಯಾಂಡ್​

ಬೆಂಗಳೂರು : ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಮತದಾರರು ಬೆಂಗಳೂರು ಬಿಟ್ಟು  ಅನೇಕರು ನಾಳೆ  (Voting) ಅವರ ಊರಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್​ ಮಾಲೀಕರು ಟಿಕೆಟ್ ದರವನ್ನು ಏರಿಕೆ ಮಾಡಿದ ಹಿನ್ನೆಲೆ ಅನೇಕರು ಕೆಎಸ್​ಆರ್​ಟಿಸಿ (KSRTC) ಕಡೆ ಮುಖಮಾಡಿದ್ದಾರೆ.

ಹೌದು, ಖಾಸಗಿ ಬಸ್​ ದರ ಹೆಚ್ಚಳದಿಂದ ಕಂಗಾಲಾದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳಿಗೆ ಜಮಾಯಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಮತದಾನಕ್ಕೆ ಊರಿನತ್ತ ತೆರಳಲು ಜನರ ಪರದಾಟ

ಮತದಾನ ಮಾಡಲು ಹೋಗುತ್ತೀರುವ ಜನರಿಗೆ ಬಸ್​ ಸಿಗುತ್ತಿಲ್ಲ. ಬರುತ್ತಿರುವ ಬಸ್​ಗಳು ಎಲ್ಲಾ ಫುಲ್​ ಆಗಿ ಬರುತ್ತೀರುವುದರಿಂದ ಸಾರ್ವಜನಿಕರಿಗೆ ಪರದಾಟ ಶುರವಾಗಿದೆ.

ಪ್ರಯಾಣಿಕರಿಗಾಗಿ ಬಿಎಂಟಿಸಿ ಬಸ್ ವ್ಯವಸ್ಥೆ

ಪ್ರಯಾಣಿಕರಿಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಬಳ್ಳಾರಿ, ಹಿರಿಯೂರು, ಚಳ್ಳಕೆರೆ ಕಡೆ ಹೆಚ್ಚುವರಿ ಬಸ್​ಗಳ ಓಡಾಟ ಆರಂಭವಾಗಿದೆ. ಈ ಭಾಗದ ಪ್ರಯಾಣಿಕರಿಗಾಗಿ 10 ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ, ಹಿರಿಯೂರು, ಚಳ್ಳೆಕೆರೆ ಕಡೆ ಬಿಎಂಟಿಸಿ ಬಸ್​ ಸೇವೆ ಆರಂಭಗೊಂಡಿದ್ದು, ಹೆಚ್ಚುವರಿಯಾಗಿ ಕೆಎಸ್ಆರ್​ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಹಿರಿಯೂರಿಗೆ ಬಿಎಂಟಿಸಿ ಮೊದಲ ಹೊರಟಿದ್ದು, ಚಳ್ಳಕೆರೆ ಮಾರ್ಗಕ್ಕೆ ಮತ್ತೊಂದು ಕೆಎಸ್ಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿಗೂ ಹೆಚ್ಚುವರಿ ಬಸ್ ಹೊರಟಿದೆ. ತುಮಕೂರು,ಹಿರಿಯೂರು ಹಾಗೂ ಚಳ್ಳಕೆರೆ ಮಾರ್ಗವಾಗಿ ಈ ಬಸ್​ಗಳು ಹೊರಡಲಿವೆ. ಸದ್ಯ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಚುನಾವಣಾ ಕರ್ತವ್ಯಕ್ಕೆ ಹೆಚ್ಚು KSRTC ಬಳಕೆ ಹಿನ್ನೆಲೆ

ರಾಜ್ಯ ವಿಧಾನಸಭೆ ಚುನಾವಣೆಗಾಗಿ KSRTC ಬಸ್​ಗಳನ್ನು ಕಳುಹಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ​

RELATED ARTICLES

Related Articles

TRENDING ARTICLES