Wednesday, January 22, 2025

ಚಿಕ್ಕಪೇಟೆ ಶಾಸಕರು ರೌಡಿಗಳು, ಗೂಂಡಾಪಡೆಯನ್ನು ಸಾಕಿಕೊಂಡಿದ್ದಾರೆ : ಯುವರಾಜ್

ಬೆಂಗಳೂರು : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್ ಇಂದು ತಿಲಕ್ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಮಾಜಿ ಸಚಿವ ಹಾಗೂ ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರು ದೇವರಾಜ್ ಅವರ ಪುತ್ರ ಯುವರಾಜ್ ಅವರೊಂದಿಗೆ ಸಿದ್ದಾಪುರ ವಾರ್ಡ್, ಸೋಮೇಶ್ವರನಗರ, ತಿಲಕ್ ನಗರಗಳಲ್ಲಿ ಚುನಾವಣಾ ಪ್ರಚಾರ ನಡೆಸಿ, ಸಾಥ್ ಕೊಟ್ಟರು.

ಈ ಸಂದರ್ಭದಲ್ಲಿ  ಮಾತನಾಡಿದ ಯುವರಾಜ್, ಚಿಕ್ಕಪೇಟೆಯ ಹಿಂದಿನ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ರೌಡಿಗಳು, ಗೂಂಡಾಪಡೆಯನ್ನು ಸಾಕಿಕೊಂಡಿದ್ದಾರೆ. ಇದರಿಂದಾಗಿ ಜನ ಅವರ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಪ್ರಣಾಳಿಕೆಯಿಂದ ‘ಕಾಂಗ್ರೆಸ್ ಗೆ ನೂರಾನೆ ಬಲ’ ಬಂದಿದೆ : ಆರ್.ವಿ.ದೇವರಾಜ್

ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಭರವಸೆಗಳು ಜನರಿಗೆ ತುಂಬಾ ಇಷ್ಟವಾಗಿವೆ. ಇಂದು ಪ್ರಿಯಾಂಕಾ ಗಾಂಧಿಯವರು ರೋಡ್ ಶೋ ಗೆ ಬರಬೇಕಾಗಿತ್ತು. ಆದರೆ, ಅವರು ಮಧ್ಯಾಹ್ನ ತೆಲಂಗಾಣಕ್ಕೆ ಹೋಗಬೇಕಾದ ಕಾರಣಕ್ಕೆ ಗೋವಿಂದರಾಜನಗರ ಅಥವಾ ಚಿಕ್ಕಪೇಟೆ ಎರಡರಲ್ಲಿ ಒಂದಕ್ಕೆ ಮಾತ್ರ ಬರುವುದಾಗಿ ಹೇಳಿದ್ದಾರೆ. ಎಸ್ ಪಿಜಿ ನಿಯಮಾವಳಿಗಳ ಕಾರಣದಿಂದ ಅವರು ಚಿಕ್ಕಪೇಟೆಗೆ ಬರಲಾಗಲಿಲ್ಲ ಎಂದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿದ್ದಾರೆ. ಅದೇ ನಮಗೆ ಖುಷಿ. ಕ್ಷೇತ್ರದ ಜನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಈಗಲೂ ಅವರು ಒಂದು ಹತ್ತು ನಿಮಿಷವಾದರೂ ಬಂದು ಹೋಗುತ್ತಾರೆ ಎಂಬ ವಿಶ್ವಾಸವಿದೆ. ಸಾವಿರ ಸೇರಿದ್ದಾರೆ. ‌ಕಳೆದ ಬಾರಿ ಆದಂತೆ ಈ ಬಾರಿ ಮತ ವಿಭಜನೆ ಆಗಲ್ಲ. ಹಾಗಾಗಿ ಗೆಲ್ಲೋದು ನಾವೇ ಎಂದ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES