Monday, December 23, 2024

ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ಕೆ : ಹೈವೋಲ್ಟೇಜ್ ಕದನದಲ್ಲಿ ಗೆಲುವು ಯಾರಿಗೆ?

ಬೆಂಗಳೂರು : ಐಪಿಎಲ್ 16ನೇ ಆವೃತ್ತಿಯ ಇಂದಿನ ಹೈವೋಲ್ಟೇಜ್ ಮ್ಯಾಚ್ ನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ನಿತೀಶ್ ರಾಣ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಲಿವೆ. ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಪಂಜಾಬ್ ತಂಡ ಈ ಟೂರ್ನಿಯಲ್ಲಿ ಈವರೆಗೆ 10 ಪಂದ್ಯಗಳನ್ನು ಆಡಿದ್ದು, ಐದರಲ್ಲಿ ಗೆದ್ದು 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಕೋಲ್ಕತ್ತಾ ತಂಡ 10 ಪಂದ್ಯಗಳಿಂದ 8 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಅಂಕಪಟ್ಟಿಯಲ್ಲಿ ಮೇಲೇರಲು ಎರಡೂ ತಂಡಗಳಿಗೂ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಕೋಲ್ಕತ್ತಾ ಸೋತರೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.​

ಇದನ್ನೂ ಓದಿ : ಜಡೇಜಾ ಹೊಸ ದಾಖಲೆ : ಈ ಸಾಧನೆ ಮಾಡಿದ 8ನೇ ಕ್ರಿಕೆಟಿಗ ಜಡ್ಡು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಪಂಜಾಬ್ ಕಿಂಗ್ಸ್ ತಂಡ

ಶಿಖರ್ ಧವನ್(ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್​ಸ್ಟನ್, ಸಿಕಂದರ್ ರಜಾ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್‌ ಸಿಂಗ್‌

RELATED ARTICLES

Related Articles

TRENDING ARTICLES