Monday, December 23, 2024

ನಾನು ಮಣ್ಣಾಗುವುದರೊಳಗೆ ನಿಮ್ಮ ಸಮಸ್ಯೆ ಪರಿಹರಿಸುತ್ತೇನೆ : ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು : ನಾನು ಭೂಮಿಗೆ ಹೋಗುವುದರ ಒಳಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಮಾತನಾಡಿರುವ ಅವರು, ಈ ಬಾರಿ ನಾನು ಮುಖ್ಯಮಂತ್ರಿ ಆದ್ರೆ ಬಿಡದಿಯ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ಇರ್ತಿನಿ. ನಿಮ್ಮ ಯಾವುದೇ ಸಮಸ್ಯೆಗಳು ಇದ್ರೂ ನೇರವಾಗಿ ನನನ್ನು ಭೇಟಿ ಮಾಡಬಹುದು ಎಂದರು.

ಸರ್ಕಾರಿ ಬಂಗಲೆ ನಾನು ತೆಗೆದುಕೊಳ್ಳುವುದಿಲ್ಲ. ಕೆಲವರು ಹೇಳ್ತಾ ಇದ್ದರಲ್ಲ ತಾಜ್ ವೆಸ್ಟೇಂಡ್ ನಲ್ಲಿ ಇರ್ತಿದ್ದ ಅಂತಾ.. ನನ್ನನ್ನು ನಿಮ್ಮ ಕುಟುಂಬದವನು ಎಂದುಕೊಂಡು ನಿಮ್ಮ ಕಷ್ಟಕ್ಕೆ ನಾನು ಆಗ್ತೇನೆ. ಕೊಟ್ಟ ಮಾತು ಉಳಿಸಿಕೊಳ್ಲಲಿಲ್ಲ ಅಂದ್ರೆ ಮುಂದೆ ನಾನು ಮತಗಳನ್ನು ಕೇಳೊಕೆ ಬರೊಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ : ಪಂಚರತ್ನ ಯಾತ್ರೆ ಒಂದು ಸ್ವರ್ಣ ಮೈಲುಗಲ್ಲು : ಎಚ್.ಡಿ ಕುಮಾರಸ್ವಾಮಿ ಬಣ್ಣನೆ

ಸಿಎಂ ಆಗೋದನ್ನು ತಪ್ಪಿಸೋಕೆ ಆಗಲ್ಲ

ನಿಮ್ಮ ಮನೆ ಮಗ ಮೂರನೇ ಬಾರಿ ಮುಖ್ಯಮಂತ್ರಿ ಆಗೊದನ್ನು ಕಾಂಗ್ರೆಸ್ ಅವರ ಕೈಯಲ್ಲಿ ತಪ್ಪಿಸೋಕೆ ಆಗೊಲ್ಲ. ನಾನು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ  ನಡೆಸಿದರು.

ನನಗೆ ಎರಡು ಬಾರಿ ಹೃದಯದ ಸರ್ಜರಿ ಆಗಿದ್ರೂ ಕೂಡ ಕಳೆದ ನಾಲ್ಕು ತಿಂಗಳಿಂದ ರಾಜ್ಯ ಪ್ರವಾಸ ಮಾಡಿದ್ದೇನೆ. ನಾನು ಹೋರಾಟ ಮಾಡ್ತಾ ಇರೋದು ನಾಡಿನ ಜನತೆಗೋಸ್ಕರ. ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕಬೇಕು ಎಂದು ಪಂಚರತ್ನ ಯೋಜನೆ ರೂಪಿಸಿದ್ದೇನೆ ಎಂದು ಹೇಳೀದರು.

RELATED ARTICLES

Related Articles

TRENDING ARTICLES